ಕಾಪು : ಮಳೆಗಾಲಕ್ಕೂ ಮುನ್ನ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿತ್ತು : JDS ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ – Vishwanews24
ಕಾಪು : ಮಳೆಗಾಲಕ್ಕೂ ಮುನ್ನ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿತ್ತು : JDS ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ
ಕಾಪು :ಮಳೆಗಾಲಕ್ಕೂ ಮುನ್ನ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಜಿಲ್ಲಾಡಳಿತ ಕಂಡುಕೊಳ್ಳಬೇಕಿತ್ತು ಎಂದು ಮೂಳೂರು ಮತ್ತು ಕಾಪು ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಜುಲೈ 11ರಂದು ಭೇಟಿ ನೀಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಬಾಲಾಜಿ ಆಗ್ರಹಿಸಿದರು.
ಮಳೆಗಾಲ ಪ್ರಾರಂಭವಾದ ಮೇಲೆ ಕಡಲು ಕೊರೆತದ ಬಗ್ಗೆ ಚಿಂತಿಸುವುದಲ್ಲ. ಮುಂಚಿತವಾಗಿ ಸಮಸ್ಯೆ ಇರುವ ಪ್ರದೇಶಗಳ ಬಗ್ಗೆ ಜಿಲ್ಲಾಡಳಿತ ಯೋಚಿಸುತ್ತಿದ್ದರೆ ಕಾಪು ತಾಲೂಕಿನಲ್ಲಿ ಕಡಲು ಕೊರೆತದಿಂದ ಸಮಸ್ಯೆ ಆಗುತ್ತಿರಲಿಲ್ಲ
ಮಳೆಗಾಲ ಈಗಷ್ಟೇ ಆರಂಭವಾಗಿದೆ. ಇನ್ನೂ ಹೆಚ್ಚಿನ ಮಳೆ ಬೀಳುವ ಸಂದರ್ಭ ಸಮುದ್ರ ಕೊರೆತ ಉಂಟಾಗಿ ಕೆಲವು ಜಾಗಗಳಿಗೆ, ಮನೆಗಳಿಗೆ ಹಾನಿಯಾಗುವ ಸಂಭವವಿದೆ ಅದನ್ನು ತಡೆಗಟ್ಟಬೇಕಾಗಿದೆ.
ಸರಕಾರ ಸರಿಯಾಗಿ ಟೆಂಡರು ಮಾಡಿ ಅನುದಾನ ಬಿಡುಗಡೆ ಮಾಡಬೇಕಿದೆ.ಇದರಿಂದ ಶಾಶ್ವತ ಪರಿಹಾರ ಮಾಡಿದರೆ ಯಾವುದೇ ಸಮಸ್ಯೆ ಬಾರದು. ಸರಕಾರ ಹಣ ಬಿಡುಗಡೆ ಮಾಡದೆ ಕಾಂಟ್ರ್ಯಾಕ್ಟರ್ ಗಳಿಗೂ ತೊಂದರೆಯಾಗಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ತೆಂಕ, ಬಡ ಎರ್ಮಾಳು ಪ್ರದೇಶದಲ್ಲಿ 5 ರಿಂದ 6 ಕಿಲೋ ಮೀಟರ್ ವರೆಗೆ 45 ಕೋಟಿ ಹಣ ಮಂಜೂರಾತಿ ಮಾಡಿಸಿ ಕೆಲಸ ಮಾಡಿದ್ದಾರೆ.
ಇದೀಗ ಧನಂಜಯ ಮತ್ತು ದೇವರಾಜ ಎಂಬುವವರ ಮನೆಗಳಿಗೆ ಹತ್ತಿರವಾಗಿ ಕಡಲು ಕೊರೆತ ಆಗುತ್ತಿದೆ. ಅದಕ್ಕೆ ಆದಷ್ಟು ಬೇಗ ವ್ಯವಸ್ಥೆ ಮಾಡಬೇಕಿದೆ. ಇಲ್ಲಿ 150 ರಿಂದ 200 ಮೀಟರ್ ನಷ್ಟು ಕಲ್ಲು ಹಾಕಲು ಬಾಕಿಯಿದೆ. ಇದರಿಂದ ಮನೆಗಳಿಗೆ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಕೂಡಲೇ ಜಿಲ್ಲಾಡಳಿತ ಬಗೆಹರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
