ಕಾಪು ಮಹತೋಭಾರ ಶ್ರಿ ಲಕ್ಷ್ಮೀ ಜನಾರ್ದನ ದೇವಸ್ಥಾನ-ಶ್ರೀ ಮನ್ಮಹಾರಥೋತ್ಸವದ-ರಥಾರೋಹಣ- exclusive photos- vishwanews24
ಕಾಪು ಮಹತೋಭಾರ ಶ್ರಿ ಲಕ್ಷ್ಮೀ ಜನಾರ್ದನ ದೇವಸ್ಥಾನ-ಶ್ರೀ ಮನ್ಮಹಾರಥೋತ್ಸವದ-ರಥಾರೋಹಣ
ಕಾಪು: ಕಾಪು ಮಹತೋಭಾರ ಶ್ರಿ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಗುರುವಾರ ವೈಭವದ ಶ್ರೀ ಮನ್ಮಹಾರಥೋತ್ಸವ ನೆರವೇರಿತು.
ದೇವಸ್ಥಾನದ ಪ್ರಧಾನ ತಂತ್ರಿಗಳಾದ ಶ್ರೀಶ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ನಾರಾಯಣ ತಂತ್ರಿ ಮತ್ತು ವೈದಿಕ ವೃಂದದವರು ನಾನಾ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. ಬೆಳಗ್ಗೆ 10.೩೦ರ ಮೇಷ ಲಗ್ನದಲ್ಲಿ ರಥಾರೋಹಣ ನಡೆಯಿತು. ಬಳಿಕ ಮಧ್ಯಾಹ್ನ ನಡೆದ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಗೌರವ ಸಲಹೆಗಾರ ಕೆ.ಪಿ. ಆಚಾರ್ಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಎಂ. ಬಂಗೇರ, ಸಮಿತಿಯ ಸದಸ್ಯರಾದ ಸರೋಜಿನಿ ಜೆ ಶೆಟ್ಟಿ, ದೇವರಾಜ್ ಪಡು, ಉಮೇಶ್ ಪೂಜಾರಿ, ರಮಾ ವೈ ಶೆಟ್ಟಿ, ಎಂ ಕುಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಸುಧಿರ್ಕುಮಾರ್ ಶೆಟ್ಟಿ., ಶ್ರೀಕರ್ ಶೆಟ್ಟಿ ಕಲ್ಯ, ಸ್ವರ್ಣ ನಡಿಕೆರೆ ರತ್ನಾಕರ್ ಶೆಟ್ಟಿ, ಶಾಸಕ ಲಾಲಾಜಿ ಆರ್ ಮೆಂಡನ್, ಪ್ರಮುಖರಾದ ಉದ್ಯಮಿ ಮನೋಹರ್ ಎಸ್ ಶೆಟ್ಟಿ, ವಾಸುದೇವ ಶೆಟ್ಟಿ, ಯೋಗೀಶ್ ವಿ.ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ಮಾಧವ ಆರ್. ಪಾಲನ್, ಶ್ರೀಧರ ಶೆಣೈ, ಪ್ರಸಾದ್ ಶೆಣೈ, ಸಂದೀಪ್ ಶೆಟ್ಟಿ, ದೇವಳದ ಸಿಬಂದಿ ವರ್ಗ, ಕಾಪು ಸಾವಿರ ಸೀಮೆಯ ಹತ್ತುಸಮಸ್ತರು ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
Photo Credit:ಸನ್ನಿಧಿ ಫೋಟೊಗ್ರಾಫಿ

