ಕಾಪು : ಮಾ. 21 ಮತ್ತು 22 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – ಮೂರು ಮಾರಿಗುಡಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ – Vishwanews24
ಕಾಪು : ಮಾ. 21 ಮತ್ತು 22 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – ಮೂರು ಮಾರಿಗುಡಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಕಾಪು ಮೂರು ಮಾರಿಗುಡಿಯಲ್ಲಿ ನಡೆಯುವ 2023 ನೇ ಸಾಲಿನ ಸುಗ್ಗಿಮಾರಿಪೂಜೆಯು ಮಾರ್ಚ್ 21-22 ರಂದು ನಡೆಯಲಿದೆ ಎಂದು ಹಳೆ-ಹೊಸ-ಕಲ್ಯಾ(ಮೂರನೇ) ಮಾರಿಗುಡಿಯ ಆಡಳಿತ ಸಮಿತಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾರ್ಚ್ 14 ಮೀನ ಸಂಕ್ರಾಮಣದಂದು ಕುರಿ ಬಿಡುವ ಸಂಪ್ರದಾಯ ನಡೆಯಲಿದ್ದು ಅದರ ಮುಂದಿನ ವಾರ ಸುಗ್ಗಿ ಮಾರಿಪೂಜೆ ನಡೆಯಲಿದೆ ಎಂದು ತಿಳಿಸಿದರು.
ಉಡುಪಿ : ಮೆಹಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಡಿ.ಜೆ ಸೌಂಡ್ :ಪೊಲೀಸ್ ದಾಳಿ – Vishawanews24
ಸುಗ್ಗಿ ಮಾರಿಪುಜೆಗೆ ತುಳುನಾಡು ಮಾತ್ರವಲ್ಲದೆ ಮಲೆನಾಡು -ಹೊರರಾಜ್ಯದ ಭಕ್ತರು ಕೂಡ ಈ ಜಾತ್ರೆಯ ಸಂದರ್ಭದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಕಾಪು ಹಳೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಹೊಸಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೆಸರ ರಮೇಶ್ ಹೆಗ್ಡೆ,ಮೂರನೇ ಮಾರಿಗುಡಿಯ ಕಾರ್ಯನಿರ್ವಾಹಣಾಧಿಕಾರಿ ಸುಧಿರ್ ಕುಮಾರ್, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.
ಉಡುಪಿ : ಜಿಲ್ಲೆಯಲ್ಲಿ ಮಾರ್ಚ್ 1 ರಿಂದ ತುರ್ತು ಸೇವೆ ಹೊರತುಪಡಿಸಿ ಇತರೇ ಸರ್ಕಾರಿ ಸೇವೆ ಸ್ಥಗಿತ – Vishwanews24
