ಕಾಪು ಮಿನಿ ವಿಧಾನಸೌಧಕ್ಕೆ ಶಿಲಾನ್ಯಾಸ ನೇರೆವೇರಿಸಿದ ಸಚಿವ ಆರ್ ಅಶೋಕ್-vishwanews24

Featured, ಉಡುಪಿ

ಕಾಪು ಮಿನಿ ವಿಧಾನಸೌಧಕ್ಕೆ ಶಿಲಾನ್ಯಾಸ ನೇರೆವೇರಿಸಿದ ಸಚಿವ ಆರ್ ಅಶೋಕ್.

ಕಾಪು: ಸುಮಾರು ಹತ್ತುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಕಾಪು ತಾಲೂಕು ಮಿನಿ‌ ವಿಧಾನ ಸೌಧಕ್ಕೆ ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್ ಅಶೋಕ್ ಶಿಲಾನ್ಯಾಸ ನೆರವೇರಿಸಿದರು.

ಈ‌ ಸಂಧರ್ಭದಲ್ಲಿ ಉಡುಪಿ‌ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಉಡುಪಿ‌ ಜಿಲ್ಲಾಧಿಕಾರಿ ಜಿ‌ ಜಗದೀಶ್, ಸಹಾಯಕ ಆಯುಕ್ತ ಕೆ.ರಾಜು,ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಉಡುಪಿ‌ ಶಾಸಕ ರಘುಪತಿಭಟ್,ಕಾಪು ತಾಲೂಕು ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ,ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್,ಕಾಪು‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ,ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಹಾಗೂ ಕಾಪು ಪುರಸಭಾ ಸದಸ್ಯರು ಉಪಸ್ಥಿತರಿದ್ದರು.