ಕಾಪು ಮೂರನೇ ಮಾರಿಗುಡಿ ರಜತ ಗದ್ದಿಗೆ ನಿರ್ಮಾಣದ ಪೂರ್ವಭಾವಿ ಗ್ರಾಮ‌ಸಭೆ : vishwanews24

Featured, ಉಡುಪಿ

ಕಾಪು ಮೂರನೇ ಮಾರಿಗುಡಿ ರಜತ ಗದ್ದಿಗೆ ನಿರ್ಮಾಣದ ಪೂರ್ವಭಾವಿ ಗ್ರಾಮ‌ಸಭೆ 

ಕಾಪು : ಇತಿಹಾಸ ಪ್ರಸಿದ್ಧ ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿಗೆ ರಜತ ಗದ್ದಿಗೆ ನಿರ್ಮಾಣ ಮಾಡುವ ಸಲುವಾಗಿ ಮಂಗಳವಾರ ದೇಗುಲದ ವಠಾರದಲ್ಲಿ ಗ್ರಾಮಸ್ಥರ ಪೂರ್ವಭಾವಿ ಸಭೆ ನಡೆಯಿತು.

ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ತೊಂಭತ್ತು ಕೆಜಿ ತೂಕದ ಬೆಳ್ಳಿ ಗದ್ದಿಗೆ ನಿರ್ಮಾಣ ಕಾರ್ಯದ ಅಂಗವಾಗಿ ಸಭೆ ನಡೆದಿ ಗ್ರಾಮ ಸಮಿತಿಯನ್ನು ರಚಿಸಲಾಯಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ,ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ ಮಡುಂಬು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ಎರ್ಮಾಳು, ಪ್ರಧಾನ ಕಾರ್ಯದರ್ಶಿ ಕಲ್ಯಾ ಶ್ರೀಕರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾಪು ಬೀಡು ಅನಿಲ್ ಬಲ್ಲಾಳ್, ಮೋಹನ್ ಬಂಗೇರ ಕಾಪು, ಗಿರೀಶ್ ಪಾತ್ರಿ, ದಿವಾಕರ್ ಕಾಪು ಹಾಗೂ ಸಾವಿರ ಸೀಮೆಯ ಭಗವದ್ಭಕ್ತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply