ಕಾಪು: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

Featured, ಉಡುಪಿ

ಕಾಪು: ಯುವತಿ ನಾಪತ್ತೆ – ಪ್ರಕರಣ ದಾಖಲು

ಕಾಪು: ಮಲ್ಲಾರು ಕೋಟೆ ರಸ್ತೆಯ ನಿವಾಸಿ ಸಾನಿಯಾ ನಿಝಾ (20) ಎಂಬ ಯುವತಿ ಮಾ. 2ರಂದು ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯ ಜ್ಯೂಸ್‌ ಅಂಗಡಿಗೆ ಹೋಗಿ ಬರುವೆನೆಂದು ಹೋದವರು ಹಿಂದಿರುಗಿ ಬಾರದೇ ನಾಪತ್ತೆಯಾಗಿದ್ದಾರೆ. ಈ ಕುರಿತಾಗಿ ಕಾಪು ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಐದೂವರೆ ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿರುವ ಈಕೆ ಕನ್ನಡ, ತುಳು, ಬ್ಯಾರಿ ಭಾಷೆ ಮಾತಾಡಬಲ್ಲರು.ಇವರ ಬಗೆಗೆ ಮಾಹಿತಿ ಲಭಿಸಿದ್ದಲ್ಲಿ ಕಾಪು ಠಾಣೆ (0820 2551033)ಯನ್ನು ಸಂಪರ್ಕಿಸಬೇಕಾಗಿ ಕಾಪು ಪೊಲೀಸರು ತಿಳಿಸಿದ್ದಾರೆ.

ಕಾಪುವಿನಲ್ಲಿ ಅಮ್ಮನ ಮಕ್ಕಳೇ ಜತೆ ಸೇರಿ ಅತ್ಯದ್ಭುತವಾಗಿ ಮಾರಿಗುಡಿಯನ್ನು ನಿರ್ಮಿಸಿದ್ದಾರೆ : ಪೇಜಾವರ ಶ್ರೀ – vishwanews24

Leave a Reply