ಕಾಪು: ರಕ್ಷಾ ಸಾವು ಪ್ರಕರಣ: ತುಳುನಾಡ ಹಿಂದೂ ಸೇನೆಯ ಆಶ್ರಯದಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ -Vishwanews24
ಕಾಪು: ರಕ್ಷಾ ಸಾವು ಪ್ರಕರಣ: ತುಳುನಾಡ ಹಿಂದೂ ಸೇನೆಯ ಆಶ್ರಯದಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕಾಪು ಪೇಟೆಯಲ್ಲಿ ಮೊಂಬತ್ತಿ ಪ್ರತಿಭಟನೆ -Vishwanews24
ಕಾಪು: ಕಾಪುವಿನ ಗೃಹಿಣಿ ರಕ್ಷಾ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಕುರಿತಾಗಿ ತುಳುನಾಡ ಹಿಂದೂ ಸೇನೆಯ ಆಶ್ರಯದಲ್ಲಿ ಕಾಪು ಪೇಟೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ ನಡೆಯಿತು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಎಸ್.ಸಿ.ಡಿ..ಸಿ.ಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ ಶೆಟ್ಟಿ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ತುಳುನಾಡ ಹಿಂದೂ ಸೇನೆಯ ಅಧ್ಯಕ್ಷ ನಿತಿನ್ ಕಾಪು, ಕಾರ್ಯದರ್ಶಿ ಯಾದವ ಪೂಜಾರಿ, ಚಿತ್ತನ್ ಮೂಳೂರು, ಶಿವಪ್ರಸಾದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

