ಕಾಪು : ರಸ್ತೆ ಬದಿ ನಿಂತಿದ್ದ ವೇಳೆ ಕಾರು ಢಿಕ್ಕಿ ; ಖಾಸಗಿ ಬಸ್ ಮಾಲಕ ಸಾವು – Vishwanews24
ಕಾಪು : ರಸ್ತೆ ಬದಿ ನಿಂತಿದ್ದ ವೇಳೆ ಕಾರು ಢಿಕ್ಕಿ ; ಖಾಸಗಿ ಬಸ್ ಮಾಲಕ ಸಾವು
ಕಾಪು :ರಸ್ತೆ ಬದಿ ನಿಂತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಮಾಲಕ ಮೃತಪಟ್ಟ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾಪು ಮಹಾವೀರ್ ಬಸ್ನ ಮಾಲಕ, ಜೈನ ಬಸದಿ ಮನೆಯ ಮಹೇಂದ್ರ ಕುಮಾರ್ ಇಂದ್ರ (60) ಮೃತಪಟ್ಟವರು.. ಮಂಗಳವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ತಮ್ಮ ಮನೆಗೆ ಹೋಗಲು ಕಾಪು ಪೆಟ್ರೋಲ್ ಬಂಕ್ ಬಳಿ ನಿಂತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಮನೆ ಸಮೀಪದಲ್ಲೇ ಈ ಅಪಘಾತ ಸಂಭವಿಸಿದ್ದು, ಅವರ ಸಹೋದರ ಮನೆಯ ಹೊರಗೆ ಬಂದು ನೋಡಿದಾಗ ಈ ವಿಚಾರ ತಿಳಿದಿದೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಕಳೆದ ಸುಮಾರು ನಾಲ್ಕು ದಶಕಗಳಿಂದ ಬಸ್ ಮಾಲಕರಾಗಿ ಮಹೇಂದ್ರಕುಮಾರ್ ಸೇವೆ ಸಲ್ಲಿಸಿದ್ದರು. ಸಹೋದರ ಕಾಪು ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
