ಕಾಪು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪಾನರರಿಗೆ ಹೊಸ ಮಾರಿಗುಡಿಯಿಂದ ಚಿತ್ರನಟಿ ಜಯಪ್ರಧಾ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ : vishwanews24
ಕಾಪು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪಾನರರಿಗೆ ಹೊಸ ಮಾರಿಗುಡಿಯಿಂದ ಚಿತ್ರನಟಿ ಜಯಪ್ರಧಾ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ
ಗುಡ್ಡಪಾನರ ಅವರನ್ನು ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಅದೊಂದು ನನ್ನ ಪಾಲಿನ ಸೌಭಾಗ್ಯ : ಚಿತ್ರನಟಿ ಜಯಪ್ರಧಾ
ಕಾಪು: ಕಾಪು ಹೊಸ ಮಾರಿಗುಡಿ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಕಾಪು ಪಿಲಿಕೋಲ ದೈವ ನರ್ತಕ ಗುಡ್ಡ ಪಾಣಾರ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಆಡಳಿತ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ,ಬಹುಭಾಷ ಚಿತ್ರನಟಿ ಜಯಪ್ರಧಾ ಅವರು ನೆರವೇರಿಸಿದರು.
ಕಾಪು ಹೊಸ ಮಾರಿಗುಡಿಗೆ ಬಹುಭಾಷ ಚಿತ್ರನಟಿ – ರಾಜ್ಯ ಸಭಾ ಸದಸ್ಯೆ ಜಯಪ್ರಧಾ ಭೇಟಿ – vishwanews24
ತದನಂತರ ಮಾತನಾಡಿದ ಜಯಪ್ರದಾ ಅವರು ಕಾಪು ಹೊಸ ಮಾರಿಗುಡಿ ದೇವಸ್ಥಾನ ವೇಗಗತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ ಇಂತಹ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಯ ವಿಚಾರವಾಗಿ ಗ್ರಾಮಸ್ಥರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿಲಾ ಸೇವೆಯಲ್ಲಿ ಭಾಗಿಯಾಗಬೇಕು ನಾನು ಕೂಡ ನನ್ನ ವೈಯಕ್ತಿಕ ನೆಲೆಯಿಂದ ದೇಗುಲ ನಿರ್ಮಾಣಕ್ಕೆ ಸಹಕಾರ ಮಾಡುತ್ತೇನೆ ಮತ್ತು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯರಾದ ಗುಡ್ಡಪಾನರ ಅವರನ್ನು ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಅದೊಂದು ನನ್ನ ಪಾಲಿನ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಗಂಗಾಧರ ಸುವರ್ಣ ,ಮಾಧವ ಪಾಲನ್, ಸುಧಾಮ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು: ವೈದ್ಯಕೀಯ ವಿದ್ಯಾರ್ಥಿ ಸಾವು ಪ್ರಕರಣ.. ಸಿಬಿಐ ತನಿಖೆಗೆ ಸುಪ್ರೀಂ ಆದೇಶ – Vishwanews24
