ಕಾಪು: ಶಿರ್ವಾ ಯುವ ಕಾಂಗ್ರೆಸ್ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಸುತ್ತಿರುವುದು ಹಾಸ್ಯಾಸ್ಪದ : ಬಿಜೆಪಿ ಸ್ಥಾನೀಯ ಸಮಿತಿ ಶಿರ್ವಾ – vishwanews24

Featured, ಉಡುಪಿ

ಕಾಪು: ಶಿರ್ವಾ ಯುವ ಕಾಂಗ್ರೆಸ್ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಸುತ್ತಿರುವುದು ಹಾಸ್ಯಾಸ್ಪದ : ಬಿಜೆಪಿ ಸ್ಥಾನೀಯ ಸಮಿತಿ ಶಿರ್ವಾ

ಕಾಪು: ಕಟಪಾಡಿಯಿಂದ ಶಿರ್ವಾ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಒಳಪಟ್ಟು ಸಂಪೂರ್ಣವಾಗಿ ಹದಗೆಟ್ಟ ಸಂದರ್ಭದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಅವಿರತ ಪರಿಶ್ರಮದಿಂದ NH CRF ಅನುದಾನದಿಂದ 6ಕೋಟಿ ರೂ ಮತ್ತು ಲೋಕಪಯೋಗಿ ಇಲಾಖೆಯ 3ಕೋಟಿ ಅನುದಾನದಿಂದ ಸುಮಾರು 9 ಕಿ.ಮೀ ರಸ್ತೆಯು ಸಂಪೂರ್ಣ ದುರಸ್ಥಿಗೊಂಡಿರುತ್ತದೆ. ಸದ್ರಿ ರಸ್ತೆಯ 3-4 ಕಿ.ಮೀ ರಸ್ತೆ ಬಾಕಿಯಿದ್ದು, ಈಗಾಗಲೇ ಶಾಸಕರ ಇಚ್ಛಾಶಕ್ತಿಯಿಂದ ಅನುದಾನ ಕ್ರೂಢಿಕರಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಶಿರ್ವಾ ಯುವ ಕಾಂಗ್ರೆಸ್ ಈ ವಿಚಾರವನ್ನಿಟ್ಟುಕೊಂಡು ಪ್ರತಿಭಟಿಸುವುದು ಹಾಸ್ಯಾಸ್ಪದವಾಗಿದೆ.

ಕಳೆದ 2ವರ್ಷಗಳಿಂದ ಅಸಮರ್ಪಕ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ರಾಜ್ಯ ಸರಕಾರದ ಶುಲ್ಕ ಮತ್ತು ಬೆಲೆ ಏರಿಸಿ ಜನಸಾಮಾನ್ಯರ ದುಸ್ಥರ ಸ್ಥಿತಿಗೆ ಕಾರಣರಾಗಿಯೂ ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆ ಮಾಡದಿರುವುದು ಖಂಡನೀಯ.

ಇದನ್ನು ಮನಗೊಂಡ ಶಿರ್ವಾ ಯುವ ಕಾಂಗ್ರೆಸ್ ತಮ್ಮದೇ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ವಿರುದ್ಧ ಪ್ರತಿಭಟಿಸುತ್ತಿರುವುದು ಸ್ವಾಗತಾರ್ಹವಾಗಿದೆ, ಮಾಜಿ ಸಚಿವರು ಮತ್ತು ಕಾಂಗ್ರೆಸ್ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವಾಗ ಗ್ಯಾರಂಟಿಗೋಸ್ಕರ ಆರೋಗ್ಯ ಶುಲ್ಕದಿಂದ ಹಿಡಿದು ಮುದ್ರಾಂಕ ಶುಲ್ಕದವರೆಗಿನ ಎಲ್ಲಾ ಸರಕಾರಿ ಶುಲ್ಕಗಳನ್ನು ಪಟ್ಟು ಹೆಚ್ಚಿಸಿದ್ದರೂ ಅಭಿವೃದ್ಧಿಗೆ ಸರಕಾರ ಹಣ ನೀಡದಿರುವುದನ್ನು ಮುಂದಿನ ದಿನಗಳಲ್ಲಿ ವೇದಿಕೆಯಲ್ಲಿ ತಿಳಿಸಿದರೆ ಉತ್ತಮ ಎಂದು ತಿಳಿಸಿದರು.

ಈ ಬಗ್ಗೆ ವಿಚಾರ ಪ್ರಸ್ತಾಪವಾದ ಕೂಡಲೇ ಮಾಜಿ ಸಚಿವರು ರಾಜ್ಯ ಸರಕಾರವು ಅಲ್ಪಸ್ವಲ್ಪ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡಿರುತ್ತಾರೆ .

ಕಾಪು ಕ್ಷೇತ್ರದ ಮಾಜಿ ಸಚಿವರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಜಿ ಪಡೆದು ಉಸ್ತುವಾರಿ ಸಚಿವರ ಮತ್ತು MLC ಗಳಿಗೆ ಉಲ್ಲೇಖಿಸಿ ಪತ್ರ ಬರೆಯುತ್ತಿರುವ ತಮಗೆ ಲೋಕಪಯೋಗಿ ಇಲಾಖೆಯ ಸಚಿವರಿಂದ ಅನುದಾನವನ್ನು ಬಿಡುಗಡೆಗೊಳಿಸಬಹುದಲ್ಲವೇ ತಮ್ಮ ಭ್ರಷ್ಟ ರಾಜ್ಯ ಸರಕಾರದ ದಿವಾಳಿತನವನ್ನು ಮರೆಮಾಚುವದಕ್ಕೋಸ್ಕರ ಈ ರೀತಿ ಪ್ರತಿಭಟಿಸುವ ನಾಟಕವಾಡುದನ್ನು ಬಿಟ್ಟು ಅಭಿವೃದ್ಧಿಯನ್ನು ಮಾಡಿಸಿ ತಾನು ರಾಜ್ಯ ಸರಕಾರದ ಪ್ರತಿನಿಧಿ ಎಂದು ತೋರಿಸಬೇಕೆಂದು ಶಿರ್ವಾ ಬಿಜೆಪಿ ಸ್ಥಾನೀಯ ಸಮಿತಿ ತಮ್ಮನ್ನು ವಿನಂತಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Leave a Reply