ಕಾಪು ಹೊಸಮಾರಿಗುಡಿ ಮುಂಭಾಗದ ಫ್ಲೈಒವರ್ ನಲ್ಲಿ ಟಯರ್ ಒಡೆದು ಪಲ್ಟಿಯಾದ ಅಡಿಕೆ ಸಾಗಾಟದ ಟೆಂಪೋ :vishwanews24

Featured, ಉಡುಪಿ

ಕಾಪು ಹೊಸಮಾರಿಗುಡಿ ಮುಂಭಾಗದ ಫ್ಲೈಒವರ್ ನಲ್ಲಿ ಟಯರ್ ಒಡೆದು ಪಲ್ಟಿಯಾದ ಅಡಿಕೆ ಸಾಗಾಟದ ಟೆಂಪೋ :vishwanews24

ಕಾಪು, ಜ.12: ಅಡಿಕೆ ಸಾಗಾಟದ ಟೆಂಪೋವೊಂದು ಟಯರ್ ಸಿಡಿದು ಉರುಳಿಬಿದ್ದ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಫೈಓವರ್ ನಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ನಡೆದಿದೆ.
ಈ ಅಪಘಾತದಿಂದ ಟೆಂಪೋದಲ್ಲಿದ್ದ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಸಿದ್ದಾಪುರದಿಂದ ಮಂಗಳೂರಿಗೆ ಅಡಿಕೆ ಸಾಗಾಟ ಮಾಡುತ್ತಿದ್ದ ಟೆಂಪೋವಿನ ಟಯರ್ ಮಾರ್ಗ ಮಧ್ಯೆ ಒಡೆಯಿತೆನ್ನಲಾಗಿದೆ. ಇದರ ಪರಿಣಾಮವ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಫ್ಟ್ ಒವರ್ ನಲ್ಲಿ ಪಲ್ಟಿಯಾಗಿ ರಸ್ತೆ ಗೆ ಅಡ್ಡ ವಾಗಿ ಬಿದ್ದಿದೆ.

ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply