ಕಾಪು: ಹೊಸ ಮಾರಿಗುಡಿಯಲ್ಲಿ ವಿಶೇಷ ಪೂಜೆ, ಉರುಳುಸೇವೆ – vishwanews24

Featured, ಉಡುಪಿ

ಕಾಪು: ಹೊಸ ಮಾರಿಗುಡಿಯಲ್ಲಿ ವಿಶೇಷ ಪೂಜೆ, ಉರುಳುಸೇವೆ

ಕಾಪು:  ಕಾಪುವಿನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹತ್ತಿರವಾಗುತ್ತಲೇ ಸಮಿತಿಯ ಭಕ್ತರು ಕಾಪುವಿನ ಒಡೆಯ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ಉರುಳು ಸೇವೆ ನಡೆಸಿದ್ದಾರೆ.

ಕಾಪುವಿನ ಅಮ್ಮನ ಜೀರ್ಣೋದ್ಧಾರ ಕಾರ್ಯಗಳು ಮತ್ತು ಮುಂದಿನ ದಿನಗಳಲ್ಲಿ ನಡೆಯಲಿರುವ ಧಾರ್ಮಿಕ ವಿಧಿವಿಧಾನಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿ, ಇಂದು ಮುಂಜಾನೆ, ಸಮಿತಿಯ ಸದಸ್ಯರು ಹಾಗೂ ಇನ್ನಿತರರು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಕೆರೆಯಲ್ಲಿ ಮಿಂದು, ದೇವಾಲಯದ ಪ್ರಾಕಾರದಲ್ಲಿ ಉರುಳು ಸೇವೆ ನಡೆಸಿದರು.

ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆದ್ಯತೆ : ಮುಖ್ಯಮಂತ್ರಿ – vishwanews24

ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಮುಖರಾದ ದೇವಿ ಪ್ರಸಾದ್ ಶೆಟ್ಟಿ, ದಿವಾಕರ್ ಶೆಟ್ಟಿ, ರಮೇಶ್ ಕಲ್ಯಾ, ಗೋವರ್ಧನ್ ಶೇರಿಗಾರ್, ರಘುರಾಮ್ ಶೆಟ್ಟಿ, ಹರೀಶ್ ನಾಯಕ್ ಕಾಪು, ಜಗದೀಶ್ ಬಂಗೇರ ಉರುಳು ಸೇವೆ ನಡೆಸಿದರು.

ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ – vishwanews24

Leave a Reply