ಕಾಪು ಹೊಸ ಮಾರಿಗುಡಿ ದೇವಸ್ಥಾನ : ಫೆ. 4ರಂದು ನವಚಂಡೀಯಾಗ, ಮಹಾ ಅನ್ನಸಂತರ್ಪಣೆ – vishwanews24

Featured, ಉಡುಪಿ

ಕಾಪು ಹೊಸ ಮಾರಿಗುಡಿ ದೇವಸ್ಥಾನ : ಫೆ. 4ರಂದು ನವಚಂಡೀಯಾಗ, ಮಹಾ ಅನ್ನಸಂತರ್ಪಣೆ

ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಕಾಪು: ಸಮಗ್ರ ಜೀರ್ಣೋ ದ್ಧಾರವಾಗಿ ಕಂಗೊಳಿಸುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನ್ನಿಧ್ಯಾಭಿವೃದ್ಧಿ ಮತ್ತು ಲೋಕಕಲ್ಯಾರ್ಥ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಪ್ರಧಾನ ತಂತ್ರಿ ವಿದ್ವಾನ್‌ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ಫೆ. 4ರಂದು ನವಚಂಡೀಯಾಗ ನಡೆಯಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌ ಹೇಳಿದರು.

ಫೆ. 3ರಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಾತೃಕಾ ಪೂಜನಂ, ನಾಂದಿ ಸಮಾರಾಧನಂ, ಅರಳಿ ಪೂಜನಂ, ವೇದ ಪಾರಾಯಣಂ, ಅರಣೀ ಮತನಂ, ಅಗ್ನಿ ಸಂರಕ್ಷಣಂ, ನಿರ್ವಿಘ್ನಾಂಗ ಆದ್ಯಗಣಯಾಗ, ಸಂಜೆ 5.30ಕ್ಕೆ ನವಚಂಡಿಪಾರಾಯಣಂ, ಕುಂಡ ಸಂಸ್ಕಾರ, ಅಗ್ನಿ ಜನನಂ, ವಾಗೆªàವತಾ ಪೂಜೆ, ಅಷ್ಟಾವಧಾನಂ ನಡೆಯಲಿದೆ.

ಕಾರ್ಕಳ: ಲಾಭಾಂಶದ ಅಸೆ ತೋರಿಸಿ 66 ಲಕ್ಷಕ್ಕೂ ಅಧಿಕ ರೂ. ವಂಚನೆ – vishwanews24

ಫೆ. 4ರಂದು ಬೆಳಗ್ಗೆ 6.30ಕ್ಕೆ ನವಚಂಡೀಯಾಗ ಆರಂಭ, ಕಲೊ³àಕ್ತ ಪೂಜೆ, ಮಹಾಮಂಗಳಾರತಿ, 11 ಗಂಟೆಗೆ ಪೂರ್ಣಾಹುತಿ, ಮಹಾಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ.

ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಉಡುಪಿ ಶ್ರೀ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಡಾ| ರಾಮಲಿಂಗಾ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಮುಖ್ಯ ಅತಿಥಿಗಳಾಗಿರುವರು. ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ್‌ ಭಂಡಾರಿ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತ ವೆಂಕಟೇಶ್‌ ಭಾಗವಹಿಸಲಿದ್ದಾರೆ ಎಂದರು.

ಜಾತೀಯತೆ ದೂರವಾಗಬೇಕೆಂದು ಧ್ವನಿ ಎತ್ತಿದ್ದ ಗಾಂಧಿಯನ್ನು ದ್ವೇಷದಿಂದ ಗುಂಡಿಟ್ಟು ಕೊಲ್ಲಲಾಯಿತು : ನಿಕೇತ್ ರಾಜ್ ಮೌರ್ಯ – vishwanews24

ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್‌ ಶೆಟ್ಟಿ ಬಾಲಾಜಿ, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್‌, ಕೋಶಾಧಿಕಾರಿ ಕೆ. ವಿಶ್ವನಾಥ್‌, ಸಂಘಟನ ಕಾರ್ಯದರ್ಶಿ ಸಂದೀಪ್‌ ಕುಮಾರ್‌ ಮಂಜ, ಸಂಚಾಲಕ ಸುವರ್ಧನ ನಾಯಕ್‌, ಮಹಿಳಾ ಮುಖ್ಯ ಸಂಚಾಲಕಿ ಗೀತಾಂಜಲಿ ಎಂ. ಸುವರ್ಣ, ಮಹಿಳಾ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್‌ ಉಪಸ್ಥಿತರಿದ್ದರು.

Leave a Reply