ಕಾಪು: 8 ವರ್ಷಗಳ ಹಿಂದೆ ಮಲ್ಲಾರಿನಲ್ಲಿ ಮನೆಗಳ್ಳತನ ಮಾಡಿತ ಖತರ್ನಾಕ್ ಕಳ್ಳರ ಬಂಧನ.vishwanews24
ಕಾಪು: 8 ವರ್ಷಗಳ ಹಿಂದೆ ಮಲ್ಲಾರಿನಲ್ಲಿ ಮನೆಗಳ್ಳತನ ಮಾಡಿತ ಖತರ್ನಾಕ್ ಕಳ್ಳರ ಬಂಧನ
ಕಾಪು: ಕಾಪು ಠಾಣಾ ವ್ಯಾಪ್ತಿಯ ಮಲ್ಲಾರು ಕೋಟೆ ಎಂಬಲ್ಲಿ ಮನೆಗಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಕಳ್ಳರನ್ನು ಕಾಪು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲಾರು ನಿವಾಸಿ ಅಬ್ದುಲ್ ಸತ್ತಾರ್ (38) ಮತ್ತು ಕುತ್ಯಾರು ನಿವಾಸಿ ಅಬ್ದುಲ್ ರಹಮಾನ್ ಪುದಿನ್ ಯಾನೆ ರಹೀಂ (49) ಎಂದು ಗುರುತಿಸಲಾಗಿದೆ.
2012ರ ಜುಲೈ ನಲ್ಲಿ ಮಲಾರು ಗ್ರಾಮದ ಕೋಟೆ ಎಂಬಲ್ಲಿರುವ ಪರ್ವಿನ್ ಬಾಬು ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಿಂದಿನ ಬಾಗಿಲನ್ನು ಯಾವುದೋ ಬಲವಾದ ಆಯುಧದಿಂದ ಮುರಿದು ಒಳಪ್ರವೇಶಿಸಿ ಮನೆಯ ಒಳಗೆ ಬೆಡ್ ರೂಮಿ ನಲ್ಲಿ ಗೋದ್ರೆಜ್ ನ್ನು ಕೀ ಬಳಸಿ, ಅದರ ಒಳಗೆ ಇಟ್ಟಿದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಾಗೂ ಇನ್ನೊಂದು ರೂಮಿ ನಲ್ಲಿ ರೂ. 50,000 ಮೌಲ್ಯದ ಬಾಕ್ಸ್ ಪಾತ್ರೆ ಪರಿಕರಗಳು, ನಳ್ಳಿ ನೀರಿನ ಬೀಗ ಡೋರ್ ಲಾಕ್ ಕಳವು ಮಾಡಿಕೊಂಡು ಹೋದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಯವರು ಸದ್ಯಕ್ಕೆ ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ‘ಸಿ’ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದರು.
ಪ್ರಕರಣ ದಾಖಲಾಗಿ 08 ವರ್ಷ ಕಳೆದಿದ್ದು, ಪ್ರಸ್ತುತ ಸದ್ರಿ ಪ್ರಕರಣದ ಆರೋಪಿಗಳ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಆಬುಲ್ ಸತ್ತಾರ್, (36), ಎಂಬವನನ್ನು ಸಿಪಿಐ ಕಾಪು ವಿಚಾರಣೆ ನಡೆಸಿದ್ದು, ಆತನು ತನ್ನ ತಪ್ಪನ್ನು ಒಮ್ಮೆ ತಾನು ಹಾಗೂ ಅಬುಲ್ ರೆಹಮಾನ್ ಪಕ್ರುದ್ದೀನ್ ಯಾನೆ ರಹೀಂ ಎಂಬವರು ಇನ್ನಿಬ್ಬರು ಆರೋಪಿಗಳ ಜೊತೆ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆತನನ್ನು ದಸ್ತಗಿರಿ ಮಾಡಿದ್ದು, బಳಿಕಇನೋರ್ವ ಆರೋಪಿತ ಅಬ್ದುಲ್ ರೆಹಮಾನ್ ಪಕ್ರುದ್ದೀನ್ ಯಾನೆ ರಹೀಂ ನನ್ನು ದಸ್ತಗಿರಿಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಕಳವು ಮಾಡಿದ ಸೊತ್ತುಗಳಾದ ಚಿನ್ನದ ನೆಕ್ಸಸ್ ಹಾಗೂ ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಅಂದಾಜು ಮೌಲ್ಯ ರೂ. 1,92,000/ ಆಗಿರುತ್ತದೆ
ಈ ಕಾರ್ಯಾಚರಣೆಯನ್ನು ವಿಷ್ಣುವರ್ಧನ್ ಎನ್, ಐಪಿಎಸ್, ಪೊಲೀಸ್ ಅಧೀಕ್ಷಕರು ಉಡುಪಿ ಮತ್ತು ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಮತ್ತು ಭರತ್ ಎಸ್ ರೆಡಿ, ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಉಪವಿಭಾಗ, ಕಾರ್ಕಳ ರವರ ನಿರ್ದೇಶನದಲ್ಲಿ ಪ್ರಕಾಶ್, ವೃತ್ತ ನಿರೀಕ್ಷಕರು ಕಾಪು ವೃತ್ತ ರವರು ನಡೆಸಿದ್ದು, ಕಾಪು ಠಾಣಾ ಅಪರಾಧ ವಿಭಾಗದ ಪಿಎಸ್,ಐ, ಯುನೂಸ್ ಗಡ್ಕರ್ ಮತ್ತು ಜಿಲ್ಮಾ ಪೊಲೀಸ್ ಕಛೇರಿಯ ಅಚ್ಚುತ್ರ ನಾಗರಾಜು ಹಾಗೂ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಪ್ರವೀಣ ಕುಮಾರ್, ನಾರಾಯಣ, ರಾಜೇಶ್, ಸಂದೇಶ್, ಆನಂದ ರವರು ಕಾರ್ಯಾಚರಣೆ ನಡೆಸಿದ್ದಾರೆ.

