ಕಾಪು TO ಮಿಡ್ಲ್ಯಾಂಡ್ ಗೆ ಬೈಕ್ ನಲ್ಲಿ ಹೊರಟ ಕಾಪುವಿನ ಯುವಕರು.

Featured, ಉಡುಪಿ

ಕಾಪು TO ಮಿಡ್ಲ್ಯಾಂಡ್ ಗೆ ಬೈಕ್ ನಲ್ಲಿ ಹೊರಟ ಕಾಪುವಿನ ಯುವಕರು.

ಕಾಪು: ಕಳೆದ ಮೂರು ವರ್ಷಗಳಿಂದ ಬೈಕ್ ನಲ್ಲಿ ದೇಶ ಪರ್ಯಟನೆ ಹೊರಡುತ್ತೀರುವ ಯುವಕರ ತಂಡ ಈ‌ ಬಾರಿಯ ಪಯಣ ಮಿಡ್ಲ್ಯಾಂಡ್ ಕಡೆ ಹೊರಟಿದೆ.

ಕಾಪುವಿನ ಸಚಿನ್ ಶೆಟ್ಟಿ, ದಿನೇಶ್ ಕೋಟ್ಯಾನ್, ಮೂಡಬಿದಿರೆಯ ರವಿ ಆಚಾರ್ಯ ಪರ್ಯಟನೆ ಹೊರಟಿರುವ ಯುವಕರು.

ಸುಮಾರು 45 ದಿನಗಳ ಪ್ರವಾಸ ಇದಾಗಿದ್ದು ಒಟ್ಟು 2 ಲಕ್ಷದವರೆಗೆ ಖರ್ಚೆ ವೆಚ್ಚ ಅಂದಾಜಿಸಲಾಗಿದೆ.

ಈ ಬಗ್ಗೆ ರೈಡರ್ ಸಚಿನ್ ಶೆಟ್ಟಿ ಮಾತಾಡಿ” ವಿವಿಧ ರಾಜ್ಯದ ಆಚಾರ ವಿಚಾರ ಆಹಾರ ಶೈಲಿ ಮತ್ತು ಸಾಂಸ್ಕೃತಿಕ ಸಾಂಪ್ರದಾಯಿಕ ಚಟುವಟಿಕೆಗಳ ಅಧ್ಯಯನ ಚಿತ್ರಿಕರಣದ ಉದ್ದೇಶ ಇದಾಗಿದೆ,ಮತ್ತು ಯುವಕರು ಸಂಚಾರಿ ಕಾನೂನು ನಿಯಮಗಳನ್ನು ಎಲ್ಲಾರೂ ಪಾಲಿಸಿಕೊಂಡು ಬರಬೇಕು ಅಂದು ಅಭಿಪ್ರಾಯ ಪಟ್ಟರು.

ಇಂದು ಬೆಳಗ್ಗೆ ಕಾಪು ಹೊಸ ಮಾರಿಯಮ್ಮ ದೇವಸ್ಥಾನದಿಂದ ಕಾಪುವಿನ ಪೋಲಿಸ್ ವೃತ್ತ ನೀರಿಕ್ಷಕರಾದ ಮಹೇಶ್ ಪ್ರಸಾದ್ ಅವರು ಪಯಣಕ್ಕೆ ಚಾಲನೆ ನೀಡಿ,ಸಂಚಾರಿ ನಿಯಮಗಳನ್ನು ಮೀರದಂತೆ ಕಿವಿ‌ಮಾತು ಹೇಳಿ ಹಾರೈಸಿದರು.

ಯುವಕರ ತಂಡಕ್ಕೆ ಜಿಲ್ಲೆಯ ವಿವಿಧ ಭಾಗದ ಅಭಿಮಾನಿಗಳು, ವಿವಿಧ ಸಂಘಟನೆಯ ಕಾರ್ಯಕರ್ತರು, ರಾಜಕೀಯ ಮುಖಂಡರು,ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.