ಕಾರ್ಕಳದಲ್ಲಿ ತನ್ನ ಸೋಲಿನ ಗೋರಿಯನ್ನ ತಾನೆ ಕಟ್ಟಿಕೊಂಡ ಕಾಂಗ್ರೆಸ್.

Featured, ಉಡುಪಿ

ಕಾರ್ಕಳ : ಈ ಭಾರಿ ಕಾರ್ಕಳದ ರಾಜಕೀಯ ಚಿತ್ರಣವನ್ನುಉದಯ್ ಶೆಟ್ಟಿ ಬದಲಾಯಿಸುತ್ತಾರೆಂಬ ಆಶೆ ಇದ್ದ ಜನರಿಗೆ ಕಾಂಗ್ರೆಸ್ ಗೊಪಾಲ ಭಂಢಾರಿಗೆ ಟಿಕೆಟ್ ನೀಡುವ ಮೂಲಕ ನಿರಾಶೆ ಗೊಳಿಸಿದ್ದಾರೆ. ವಿರಪ್ಪ ಮೊಯ್ಲಿಯ ಸ್ವಾರ್ಥ ರಾಜಕೀಯದಿಂದಾಗಿ ಮುನಿಯಾಲ್ ಟಿಕೆಟ್ ತಪ್ಪಿದೆಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ೫ ವರ್ಷಗಳಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಯವರಿಗೆ ವಿಧಾನಸಭಾ ಟಿಕೆಟ್ ನೀಡದೆ ವಿರಪ್ಪ ಮೊಯ್ಲಿ ದ್ರೋಹವೆಸಗಿದ್ದಾರೆ.ಇದು ಕಾರ್ಕಳದಲ್ಲಿ ಕಾಂಗ್ರೆಸನ್ನು ಮುಗಿಸುವ ‍ಷಡ್ಯಂತ್ರ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ರು.

 

ಭಂಡಾರಿ ಸೋಲಿಸಿ, ಹರ್ಷನಿಗೆ ಟಿಕೆಟ್ ಪ್ಲಾನ್

ಒಂದು ವೇಳೆ ಈ ಸಲ ಉದಯ್ ಶೆಟ್ಟಿಗೆ ಟಿಕೆಟ್ ನೀಡಿದರೇ ಕಾರ್ಕಳದಲ್ಲಿ ಜಯಗಳಿಸುವುದರಲ್ಲಿ ಅನುಮಾನವಿಲ್ಲ ಮತ್ತು ಸತತವಾಗಿ ೩ ಅವಧಿ ಮುನಿಯಾಲ್ ತನ್ನ ಅಧಿಕಾರ ವಿಸ್ತರಿಸುತ್ತಾರೆಂಬ ವಿಚಾರ ಮೊಯ್ಲಿಗೆ ತಿಳಿದಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ತನ್ನ ಪುತ್ರನಿಗೆ ಕಾರ್ಕಳ ಕಾಂಗ್ರೆಸ್ ನಿಂದ ಟಿಕೆಟ್ ನೀಡಲು ಸಾಧ್ಯವಿಲ್ಲ ಅದರ ಬದಲು ಈ ಭಾರಿ ಭಂಡಾರಿಗೆ ಟಿಕೆಟ್ ನೀಡಿ ಸೋಲಿಸಿ ಮೂಲೆಗುಂಪು ಮಾಡಿದ್ದೆ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಸುಲಭವಾಗಿ ಮಗನಿಗೆ ಟಿಕೆಟ್ ಕೊಡಿಸಬಹುದೆಂಬ ದೂರಲೋಚನೆಯು ಇರ ಬಹುದು ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಸುನೀಲ್ ಕುಮಾರ್ ಗೆ ಸರಿಸಾಟಿ ಮುನಿಯಾಲ್

ಹೌದು ಕಾರ್ಕಳದಲ್ಲಿ ಸತತವಾಗಿ ಗೆಲ್ಲುತ್ತಿರುವ ಸುನಿಲ್ ಕುಮಾರ್ ಎಂಬ ನಾಗಲೋಟದ ಕುದುರೆಗೆ ಲಗಾಮು ಹಾಕಬೇಕಾದರೆ ಮುನಿಯಾಲು ಉದಯ್ ಶೆಟ್ಟಿಯಿಂದ ಮಾತ್ರ ಸಾಧ್ಯವೆಂಬ ಅಭಿಪ್ರಾಯ ಕಾರ್ಕಳದಿಂದ ವ್ಯಕ್ತವಾಗುತ್ತಿದೆ, ಯುವ ಸಮುದಾಯ ಮತ್ತು ಮಹಿಳೆಯರು ಮುನಿಯಾಲ್ ಉದಯ್ ಶೆಟ್ಟಿ ಬೆನ್ನಹಿಂದೆ ನಿಂತಿರುವುದು ವರದಾನವಾಗಿ ಪರಿಣಮಿಸಿದೆ. ಕಾರ್ಕಳದ ಹಳ್ಳಿ ಗಲ್ಲಿಗಳಲ್ಲಿಯೂ ಉದಯ್ ಶೆಟ್ಟಿ ಹೆಸರು ಪಾದರಸದಂತೆ ಚಲಿಸುತ್ತಿರುವುದು ಸುನೀಲ್ ಕುಮಾರ್ ನಿಗೂ ನುಂಗಲಾರದ ತುತ್ತಾಗಿ ಪರಿಣಮಿಸುತ್ತು. ಆದರೇ ಮೊಯ್ಲಿಯ ಕೃಪಕಟಾಕ್ಷದಿಂದ ಸುನಿಲ್ ಕುಮಾರ್ ಗೆ ಈ ಭಾರಿ ಗಲುವು ಹಲ್ವಾ ತಿಂದಷ್ಟು ಸುಲಭವಾಗಿದೆ.

ಒಟ್ಟಾರೆಯಾಗಿ ಕಾರ್ಕಳದಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಯಿದೆ.ಇಲ್ಲಿಯ ಇಡೀ ರಾಜಕೀಯ ಚಿತ್ರಣ ಮುನಿಯಾಲ್ ಉದಯ್ ಶೆಟ್ಟಿಯ ನಿರ್ಧಾರದ ಮೇಲೆ ನಿಂತಿರುವುದಂತು ಸತ್ಯ.