ಕಾರ್ಕಳ: ಅಕ್ರಮವಾಗಿ ನೆಲೆಸಿರುವ  ಮತ್ತಿಬ್ಬರು ಬಾಂಗ್ಲಾ ವಲಸಿಗರು ವಶಕ್ಕೆ – vishwanews24

Featured, ಉಡುಪಿ

ಕಾರ್ಕಳ: ಅಕ್ರಮವಾಗಿ ನೆಲೆಸಿರುವ  ಮತ್ತಿಬ್ಬರು ಬಾಂಗ್ಲಾ ವಲಸಿಗರು ವಶಕ್ಕೆ

ಉಡುಪಿ: ಅಕ್ರಮವಾಗಿ ನೆಲೆಸಿರುವ ಮತ್ತೆ ಇಬ್ಬರು ವಲಸಿಗರನ್ನು ಪೊಲೀಸರು ಕಾರ್ಕಳದಲ್ಲಿ ಇಂದು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಕೆಲವು ದಿನಗಳ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಏಳು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ ಇವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಉಡುಪಿ: ಪ್ರಸಾದ್ ಕಾಂಚನ್ ವಿರುದ್ದ ಮಾನಹಾನಿ ಪೋಸ್ಟ್ ; ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಪಿಗೆ  ಮನವಿ – vishwanews24

ಬಂಧಿತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರ್ಕಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಇಬ್ಬರ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚಿನ ವಿಚಾರಣೆಯ ಬಳಿಕ ಬಂಧನ ಮಾಡಲಾಗುತ್ತದೆ. ಇವರ ಅಕ್ರಮ ವಾಸಕ್ಕೆ ಸಂಬಂಧಿಸಿದಂತೆ ಬುಧವಾರ ಎರಡು ಕಡೆಗಳಲ್ಲಿ ಸ್ಥಳ ಮಹಜರು ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ. ಅರುಣ್ ತಿಳಿಸಿದ್ದಾರೆ.

ಉಡುಪಿ: ಪ್ರಸಾದ್ ಕಾಂಚನ್ ವಿರುದ್ದ ಮಾನಹಾನಿ ಪೋಸ್ಟ್ ; ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಪಿಗೆ  ಮನವಿ – vishwanews24

Leave a Reply