ಕಾರ್ಕಳ : ಅನಾರೋಗ್ಯದ ಕಾರಣ ಗೃಹ ಲಕ್ಷ್ಮೀ ಹಣ ಬಿಡುಗಡೆ ವಿಳಂಬ ಹೇಳಿಕೆ ಸಮಂಜಸವಲ್ಲ : ವಿನಯ ಡಿ. ಬಂಗೇರ  – vishwanews24

Featured, ಉಡುಪಿ

ಅನಾರೋಗ್ಯದ ಕುಂಟು ನೆಪವೊಡ್ಡಿ ಸರಕಾರದ ಹುಳುಕನ್ನು ಮುಚ್ಚಿ ಹಾಕುವ ಪ್ರಯತ್ನ  : ಕಾರ್ಕಳ ಮಹಿಳಾ ಮೋರ್ಚಾ  ಅಧ್ಯಕ್ಷೆ

ಕಾರ್ಕಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ಅವರು ತಮ್ಮ ಅನಾರೋಗ್ಯದ ಕಾರಣಕ್ಕೆ ಗ್ಯಾರಂಟಿ ಯೋಜನೆಯಾದ ಗೃಹ ಲಕ್ಷ್ಮೀ ಹಣ ಬಿಡುಗಡೆ ವಿಳಂಬ ಹೇಳಿಕೆ ಸಮಂಜಸವಲ್ಲ. ಆರೋಗ್ಯ ಸರಿಯಿಲ್ಲದಿದ್ದರೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಸಹಾಯಕರು ಇದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ ಹಣ ತಮ್ಮ ಖಾಸಗಿ ಖಾತೆಯಿಂದಲ್ಲ. ಜನರ ತೆರಿಗೆಯ ಹಣ, ಸರಕಾರದ ಖಜಾನೆಯಿಂದ ನೀಡುವುದು ಎಂದು ಕಾರ್ಕಳ ಮಹಿಳಾ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರೇಯಸಿ ಸೇರಿ ತನ್ನ ಕುಟುಂಬದ ಐವರನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಯುವಕ – vishwanews24

ಅನಾರೋಗ್ಯದ ಕುಂಟು ನೆಪವೊಡ್ಡಿ ಸರಕಾರದ ಹುಳುಕನ್ನು ಮುಚ್ಚಿ ಹಾಕುವ ಪ್ರಯತ್ನ ಇದಾಗಿದೆ. ಉಪ ಚುನಾವಣೆ ಸಂದರ್ಭಗಳಲ್ಲಿ ತರಾತುರಿಯಲ್ಲಿ ಹಣ ಹಾಕುವ ವ್ಯವಸ್ಥೆ ಇರುವಾಗ ಬಾಕಿ ಸಮಯದಲ್ಲಿ ತಡವೇಕೆ ? ಮಾನ್ಯ ಸಚಿವರ ಆರೋಗ್ಯ ಶೀಘ್ರ ಗುಣಮುಖವಾಗಲಿ ಎಂಬ ಆಶಯ ನಮ್ಮದು. ಹಾಗಂತ ಚುನಾವಣೆ ಸಂದರ್ಭದಲ್ಲಿ ನೀಡಿದ ವಚನಕ್ಕೆ ಬದ್ಧರಾಗಿ ಸಮಯಕ್ಕೆ ಸರಿಯಾಗಿ ರಾಜ್ಯದ ಬಡ ಮಹಿಳೆಯರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಿನಯ ಡಿ. ಬಂಗೇರ ಆಗ್ರಹಿಸಿದ್ದಾರೆ.

ಕಾಪು : ವಿಷ ಹಾಕಿ ಸಾಕುನಾಯಿ ಕೊಂದ ಆರೋಪ ; ತನಿಖೆಗಾಗಿ ಹೂತಿದ್ದ ನಾಯಿ ದೇಹ ಹೊರತೆಗೆದು ಪೋಸ್ಟ್ ಮಾರ್ಟಂ – vishwanews24

Leave a Reply