ಕಾರ್ಕಳ: ಗೋವುಗಳ ಕಳವು ಪ್ರಕರಣ : ಪರ್ಪಲಗಿರಿ ಕಲ್ಲುರ್ಟಿ- ಕಲ್ಕುಡ ದೈವಗಳಿಗೆ ಪ್ರಾರ್ಥನೆ – VIshwanews24

Featured, ಉಡುಪಿ

ಕಾರ್ಕಳ: ಗೋವುಗಳ ಕಳವು ಪ್ರಕರಣ : ಪರ್ಪಲಗಿರಿ ಕಲ್ಲುರ್ಟಿ- ಕಲ್ಕುಡ ದೈವಗಳಿಗೆ ಪ್ರಾರ್ಥನೆ – VIshwanews24

ಕಾರ್ಕಳ : ಹೈನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದ ಕಾರ್ಕಳದ ಮಿಯ್ಯಾರು ಕಜೆ ನಿವಾಸಿ ಕಾರ್ಕಳದ ಯಶೋದಾ ಆಚಾರ್ಯ ಎಂಬವರಿಗೆ ಸೇರಿದ 16 ಗೋವುಗಳನ್ನು ಕಳವುಗೈದಿರುವ ಪ್ರಕರಣಕೆ ಸಂಬಂಧಿಸಿದಂತೆ ವಿಶ್ವಕರ್ಮ ಜಾಗೃತದಳದ ಸದಸ್ಯರು ಪರ್ಪಲಗಿರಿಯ ಕಲ್ಲುರ್ಟಿ- ಕಲ್ಕುಡ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ತಪಿಸ್ಥರಿಗೆ ತಕ್ಕ ಶಾಸ್ತ್ರಿಯಾಗುವಂತೆ ಮೊರೆಹೋಗಿದ್ದಾರೆ.

ವಿಶ್ವಕರ್ಮ ಜಾಗೃತದಳದ ಸದಸ್ಯರು ಯಶೋಧಾ ಅವರ ಮನೆಗೆ ತೆರಳಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಕುಟುಂಬಕ್ಕೆ ಮುಂದಿನ ಜೀವನಕ್ಕೆ ಆಧಾರವಾಗುವಂತೆ ಕರು ಸಹಿತವಾದ 2 ಗೋವನ್ನು ದಾನವಿತ್ತಿದ್ದಾರೆ.

ವಿಶ್ವಕರ್ಮ ಜಾಗೃತಿ ದಳದ ಎ.ಜೆ.ಜಯಶಂಕರ ಆಚಾರ್ಯ, ಗೌರವ ಸಲಹೆಗಾರ ಎ ಜೆ ಯೋಗೀಶ್, ಪ್ರಜ್ವಲ್ ಆಚಾರ್, ಕವಿತಾ ಹರೀಶ್ ಆಚಾರ್ಯ, ಪ್ರದೀಪ್‌ಆಚಾರ್, ಪದಾಧಿಕಾರಿಗಳು ಹಾಗೂ ಸದಸ್ಯರ ಜೊತೆಗಿದ್ದರು.

ಉಡುಪಿ: ಈ ಬಾರಿಯ ಪರ್ಯಾಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು : ಶಾಸಕ ರಘುಪತಿ ಭಟ್ – Vishwanews24 https://www.vishwanews24.com/?p=53630

Leave a Reply