ಕಾರ್ಕಳ: ಜೀಪ್ ಪಲ್ಟಿ-  ಯುವತಿ ಸಾವು , ಮೂವರಿಗೆ ಗಂಭೀರ ಗಾಯ -Vishwanews24

Featured, ಉಡುಪಿ

ಕಾರ್ಕಳ: ಜೀಪ್ ಪಲ್ಟಿ-  ಯುವತಿ ಸಾವು , ಮೂವರಿಗೆ ಗಂಭೀರ ಗಾಯ

ಕಾರ್ಕಳ : ಬೆಳ್ಮಣ್‌ನ ಮುಂಡ್ಕೂರು ಸಮೀಪದ ಸಂಕಲಕರಿಯ ಎಂಬಲ್ಲಿ ಜೀಪು ಪಲ್ಟಿಯಾದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಮೃತರನ್ನು ಪಾವನಿ (18) ಎಂದು ಗುರುತಿಸಲಾಗಿದೆ.

ಕಿನ್ನಿಗೋಳಿಯಿಂದ ಮುಂಡ್ಕೂರು ಕಡೆಗೆ ಜೀಪಿನಲ್ಲಿ ಚಾಲಕ ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದರು.

ಆತ್ರಾಡಿ-ಬಜ್ಪೆ ಭಾಗವಾಗಿರುವ ಬೆಳ್ಮಣ್-ಸಂಕಲಕರಿಯ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯಲ್ಲಿ ದಿಢೀರ್ ತಿರುವು ಬಂದಿರುವುದು ಚಾಲಕನ ಗಮನಕ್ಕೆ ಬಾರದೆ ಈ ಅವಘಡ ಸಂಭವಿಸಿದೆ.

ಅಪಘಾತ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ – Vishwanews24

Leave a Reply