ಕಾರ್ಕಳ : ಫೆ. 20ರಿಂದ 24ರವರೆಗೆ ಅತ್ತೂರು ಜಾತ್ರೆ – Vishwanews24

Featured, ಉಡುಪಿ

ಕಾರ್ಕಳ : ಫೆ. 20ರಿಂದ 24ರವರೆಗೆ ಅತ್ತೂರು ಜಾತ್ರೆ – Vishwanews24

ಕಾರ್ಕಳ: ಕೊರೊನಾ ಭೀತಿಯಿಂದ ಮುಂದೂಡಿದ್ದ ಸಂತ ಲಾರೆನ್ಸ್ ಮೈನರ್ ಬಿಸಿಲಿಕಾದ ವಾರ್ಷಿಕೋತ್ಸವದ ದಿನಾಂಕ ನಿಗದಿಕೊಳ್ಳಿಸಿದ್ದಾರೆ.

ಅತ್ತೂರು ಕಾರ್ಕಳ ಸೇಂಟ್ ಲಾರೆನ್ಸ್ ಮೈನರ್‌ ಬಸಿಲಿಕಾದ ವಾರ್ಷಿಕೋತ್ಸವವು ಪ್ರತಿ ವರ್ಷದಂತೆ ಈ ವರ್ಷವು ಜನವರಿ ತಿಂಗಳಲ್ಲಿ ನಿಗದಿಪಡಿಸಲಾಗಿತ್ತು, ಆದರೆ ಕೊರೊನಾ ಕಾರಣದಿಂದ ಮುಂದೂಡಬೇಕಾಯಿತು.

ಈ ಹಿಂದೆಯೇ ನಡೆಯಬೇಕಾಗಿದ್ದ ಸಂತ ಲಾರೆನ್ಸ್‌ ಚರ್ಚ್‌ನ ಉತ್ಸವವನ್ನು ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿದ್ದು, ಈ ನಿಟ್ಟಿನಲ್ಲಿ ಫೆಬ್ರವರಿ 20ರಿಂದ 24ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಸಂತ ಲಾರೆನ್ಸ್ ಮೈನರ್ ಬಿಸಿಲಿಕಾದ ವಾರ್ಷಿಕ ಉತ್ಸವ ಸಾಮಾನ್ಯವಾಗಿ ಹತ್ತು ದಿನಗಳ ಕಾಲ ನಡೆಯುತಿತ್ತು, ಆದರೆ ಈ ಬಾರಿ ಐದು ದಿನಗಳ ಕಾಲ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ.

ಮಡಿಕೇರಿಗೂ ವ್ಯಾಪಿಸಿದ ಹಿಜಾಬ್ ವಿವಾದ: ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ, ನಾವು ಕೇಸರಿ ಶಲ್ಯ ಹಾಕಿಕೊಂಡೇ ಬರುತ್ತೇವೆ – Vishwanews24

Leave a Reply