ಕಾರ್ಕಳ : ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ದುರ್ಮರಣ – Vishwanews24

Featured, ಉಡುಪಿ

ಕಾರ್ಕಳ : ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ದುರ್ಮರಣ

ಕಾರ್ಕಳ : ಚಲಿಸುತ್ತಿರುವ ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆಯೋರ್ವರು ದಾರುಣವಾಗಿ ಸಾವಿಗೀಡಾದ ಘಟನೆ ನಿಡ್ಡೊಡಿಯಲ್ಲಿ ಎ. 6ರಂದು ಮುಂಜಾನೆ ಸಂಭವಿಸಿದೆ. ಬಜಗೋಳಿ ವಲಯದ ಈದು ಅಂಗನವಾಡಿ ಕಾರ್ಯಕರ್ತೆ ಮಮತಾ (40) ಎಂಬವರೇ ಮೃತಪಟ್ಟ ದುರ್ದೈವಿ.

ಕಟೀಲು ದೇವಸ್ಥಾನಕ್ಕೆ ತೆರಳಿ ತನ್ನ ಪತಿಯ ಬೈಕಿನಲ್ಲಿ ಮನೆಗೆ ವಾಪಾಸಾಗುವ ಸಂದರ್ಭ ನಿಡ್ಡೊಡಿಯಲ್ಲಿ ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಮತಾ ಸಾವನಪ್ಪಿದ್ದಾರೆ. ಈ ಕುರಿತು ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನಗೂ ಶಾಸಕರಿಗೂ ಸಂಬಂಧವಿಲ್ಲ – ಫೋಟೋ ಎಡಿಟ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ : ಸೂಕ್ತ ಶಿಕ್ಷೆಗೆ ಮಹಿಳೆ ಆಗ್ರಹ – Vishwanews24

Leave a Reply