ಕಾರ್ಕಳ: ಭೀಕರ ಅಪಘಾತ : ರಸ್ತೆಯಲ್ಲಿ ಹೊಸ ವರ್ಷದ ಸಂದೇಶ ಬರೆಯುವಾಗ ಕಾರು ಡಿಕ್ಕಿ : ಇಬ್ಬರು ಯುವಕರು ಸಾವು -Vishwanews24
ಕಾರ್ಕಳ: ಭೀಕರ ಅಪಘಾತ : ರಸ್ತೆಯಲ್ಲಿ ಹೊಸ ವರ್ಷದ ಸಂದೇಶ ಬರೆಯುವಾಗ ಕಾರು ಡಿಕ್ಕಿ : ಇಬ್ಬರು ಯುವಕರು ಸಾವು -Vishwanews24
ಕಾರ್ಕಳ: ರಸ್ತೆಯಲ್ಲಿ ಹೊಸ ವರ್ಷದ ಸಂದೇಶ ಬರೆಯುವಾಗ ಭೀಕರ ಅಪಘಾತ ಸಂಭವಿಸಿದೆ. ಈ ಹಿನ್ನೆಲೆ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.
ಉಡುಪಿಯ ಕಾರ್ಕಳದ ಮೀಯಾರು ಕಾಜರ ಬೈಲಿ ಎಂಬಲ್ಲಿ ಈ ಘಟನೆ ಜರುಗಿದೆ. ಈ ಇಬ್ಬರು ಯುವಕರು ಹ್ಯಾಪಿ ನ್ಯೂ ಇಯರ್ ಎಂದು ರಸ್ತೆಯಲ್ಲಿ ಬರೆಯಲು ಮುಂದಾಗಿದ್ದಾರೆ. ಇದೇ ವೇಳೆಗೆ ವೇಗವಾಗಿ ಬಂದ ಈಕೋ ಕಾರು ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಕಾಪು ಕರಂದಾಡಿ ವಾದ್ಯ ಬ್ಯಾಂಡು ನಾಗಸ್ವರದೊಂದಿಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಸ್ವಾಗತ.
ಮೃತ ಯುವಕರನ್ನು ಮೂಲತಃ ಬಾಗಲಕೋಟೆಯವರಾದ ಶರಣ್ (32) ಸಿದ್ದು (28) ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
