ಕಾರ್ಕಳ: ಮೊಬೈಲ್‌ ಕೊಡಿಸಿಲ್ಲವೆಂದು ನೀರಿಗೆ ಹಾರಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ – vishwanews24

Featured, ಉಡುಪಿ

ಕಾರ್ಕಳ: ಮೊಬೈಲ್‌ ಕೊಡಿಸಿಲ್ಲವೆಂದು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಕಾರ್ಕಳ : ಮನೆಯವರು ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ನಂದಳಿಕೆಯ ಸುರೇಖಾ ಎಂಬವರ ಮಗ ಸುಮಂತ ದೇವಾಡಿಗ(16) ಎಂದು ಗುರುತಿಸಲಾಗಿದೆ. ಸುಮಂತ ನಿಟ್ಟೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ನ.12ರಂದು ಸಂಜೆ ಮನೆಯಲ್ಲಿ ತನ್ನ ತಾಯಿಯೊಂದಿಗೆ ಹೊಸ ಮೊಬೈಲ್ ತೆಗೆದುಕೊಡ ಬೇಕೆಂದು ಜಗಳ ಮಾಡಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದನು.

ನ್ಯಾಯಸಮ್ಮತವಾಗಿರದ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ : ಬಿಹಾರ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ – vishwanews24

ಹುಡುಕಾಡಿದಾಗ ನ.13ರಂದು ಮಧ್ಯಾಹ್ನ ವೇಳೆ ಕೊಡ್ಸರಬೆಟ್ಟು ಕಲ್ಲಿನ ಕೋರೆಯ ನಿಂತ ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮೊಬೈಲ್ ಕೊಡಿಸದ ಸಿಟ್ಟಿನಲ್ಲಿ ಆತ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆಯಲ್ಲಿ 9.50 ಎಕ್ರೆ ಭೂಮಿಯನ್ನು ಮೀನುಗಾರಿಕಾ ಫೆಡರೇಶನ್ ಗೆ ನೀಡುವ ನಿರ್ಧಾರಕ್ಕೆ ರಘುಪತಿ ಭಟ್ ವಿರೋಧ – vishwanews24

Leave a Reply