ಕಾರ್ಕಳ : ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು – Vishwanews24

Featured, ಉಡುಪಿ

ಕಾರ್ಕಳ : ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಕಾರ್ಕಳ : ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಹಿರಿಯಂಗಡಿಯ ಪ್ರಜ್ವಲ್‌ ದೇವಾಡಿಗ(18) ಎಂಬ ಯುವಕ ಚಿಕಿತ್ಸೆ ಫಲಿಸದೆ ಮಾ.14 ರಂದು ಮೃತಪಟ್ಟಿದ್ದಾರೆ.

ಮಾ. 12ರಂದು ರಾತ್ರಿ ಪ್ರಜ್ವಲ್‌ನ ಅಣ್ಣ ಉಜ್ವಲ್‌ ತಂದೆ ತಾಯಿ ಜತೆ ಕಾರ್ಕಳ ಮಾರಿಗುಡಿಯ ಕಾರ್ಯಕ್ರಮಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬನೇ ಇದ್ದ ಪ್ರಜ್ವಲ್‌ ವಿಷ ಸೇವಿಸಿದ್ದ. ಪ್ರಜ್ವಲ್‌ನ ಗೆಳೆಯ ಮಲ್ಲಿಕಾರ್ಜುನ ಈ ಕುರಿತು ಕರೆ ಮಾಡಿ ಉಜ್ವಲ್‌ಗೆ ವಿಷಯ ತಿಳಿಸಿದ್ದರು. ಪ್ರಜ್ವಲ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಪ್ರಜ್ವಲ್‌ ಮಂಗಳವಾರ ಅಸುನೀಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು : ಅನಧಿಕೃತ ಜಾಹೀರಾತು ಫಲಕ ತೆರವು :- ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆ ನಿಗಾ: ದ.ಕ. ಜಿಲ್ಲಾಧಿಕಾರಿ ಸೂಚನೆ – Vishwanews24

Leave a Reply