ಕಾರ್ಕಳ: ಹಿಂದೂ ಕಾರ್ಯಕರ್ತರ ಮೇಲೆ ಇರುವ ಪ್ರಕರಣ, ಗೂಂಡಾ ಕಾಯ್ದೆ ಮುಕ್ತವಾಗುವಂತೆ ಪ್ರಬಲ ಹೋರಾಟ : ಪ್ರಮೋದ್ ಮುತಾಲಿಕ್ – Vishwanews24
ಕಾರ್ಕಳ: ಹಿಂದೂ ಕಾರ್ಯಕರ್ತರ ಮೇಲೆ ಇರುವ ಪ್ರಕರಣ, ಗೂಂಡಾ ಕಾಯ್ದೆ ಮುಕ್ತವಾಗುವಂತೆ ಪ್ರಬಲ ಹೋರಾಟ : ಪ್ರಮೋದ್ ಮುತಾಲಿಕ್
ಕಾರ್ಕಳ: ಕ್ಷೇತ್ರದಿಂದ ತಾನು ಆಯ್ಕೆಯಾದರೆ ಹಿಂದೂ ಕಾರ್ಯಕರ್ತರ ಮೇಲೆ ಇರುವ ಪ್ರಕರಣ, ಗೂಂಡಾ ಕಾಯ್ದೆ ಮುಕ್ತವಾಗುವಂತೆ ಪ್ರಬಲ ಹೋರಾಟ ನಡೆಸುವುದಾಗಿ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲೂ ಪ್ರಯತ್ನಿಸಲಾಗುವುದು. ಚುನಾವಣೆಯಲ್ಲಿ ಗೆಲ್ಲಲಿ-ಸೋಲಲಿ ಮುಂದೆಯೂ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವೆ. ಹಗರಣ ಬಯಲಿಗೆಳೆಯುವೆ. ನಾಲ್ಕೈದು ದಿನ ಗಳೊಳಗೆ ಪ್ರಣಾಳಿಕೆ ಬಿಡುಗಡೆಗೊಳಿಸಲಿದ್ದು, ರಿಪೋರ್ಟ್ ಕಾರ್ಡ್‌ಗೆ ಬದಲಿ ನಾವೂ ಕಾರ್ಡ್ ಬಿಡುಗಡೆ ಮಾಡುತ್ತೇವೆ ಎಂದರು.
ಅರುಣ್ ಕುಮಾರ್ ಪುತ್ತಿಲರಿಗೆ ನನ್ನ ಬೆಂಬಲವಿದೆ. ಅವರು ಬಯಸಿದರೆ ಪುತ್ತೂರಿಗೆ ಚುನಾವಣೆ ಪ್ರಚಾರಕ್ಕೆ ತೆರಳಲು ಸಿದ್ಧ ಎಂದರು. ಪಿಎಫ್ಐ ಅಷ್ಟೇ ಅಲ್ಲ. ಎಸ್‌ಡಿಪಿಐ ಕೂಡ ದೇಶದ್ರೋಹಿ ಸಂಘಟನೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಉಡುಪಿ: ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಗೆ ಬೆಂಬಲ ಘೋಷಿಸಿದ ಕೃಷ್ಣಮೂರ್ತಿ ಆಚಾರ್ಯ – Vishwanews24
