ಕಾರ್ಗಿಲ್ ಯುದ್ಧದಂತಹ ಮತ್ತೊಂದು ಪ್ರಯತ್ನಕ್ಕೆ ಪಾಕ್‍ ಕೈ ಹಾಕುವುದಿಲ್ಲ : ಬಿಪಿನ್ ರಾವತ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದ್ದರೂ ಪಾಕ್, ಕಾರ್ಗಿಲ್ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಕೆಲವು ವರ್ಷಗಳಲ್ಲಿ ಅಪ್ರಚೋದಿತ ದಾಳಿ ಕೂಡ ನಿಲ್ಲಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಶಸ್ತ್ರ ಪಡೆಗಳು ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸಿವೆ. ಎಲ್ಲ ಪ್ರದೇಶವನ್ನೂ ರಕ್ಷಿಸುತ್ತೇವೆ. ಸೈನ್ಯದವರು ಕಟ್ಟುನಿಟ್ಟಾಗಿ ಕಾವಲು ಕಾಯುತ್ತಿವೆ ಎಂದು ತಿಳಿಸಿದರು.

ಗಡಿಯಲ್ಲಿ ನಮ್ಮ ಸೇನೆ ಕಣ್ಗಾವಲು ಇರಿಸಿದ್ದು, ಬಿಗಿ ಬಂದೋಬಸ್ತ್ ಮಾಡಿದೆ. ಹೀಗಾಗಿ ಪಾಕಿಸ್ತಾನ ಕಾರ್ಗಿಲ್ ಯುದ್ಧದಂತಹ ಮತ್ತೊಂದು ಪ್ರಯತ್ನಕ್ಕೆ ಪಾಕಿಸ್ತಾನ ಕೈ ಹಾಕುವುದಿಲ್ಲ. ಏಕೆಂದರೆ ಅದರ ಪರಿಣಾಮವೇನು ಎಂದು ಪಾಕಿಸ್ತಾನಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ನಡೆಯುತ್ತಿರುವ ಅಪ್ರಚೋದಿತ ದಾಳಿ ಮುಂದಿನ ವರ್ಷಗಳಲ್ಲಿ ನಿಲ್ಲಲಿದೆ. ಪಾಕ್ ಗೆ ಇನ್ಮುಂದೆ ಅಪ್ರಚೋದಿತ ದಾಳಿ ನಡೆಸಲು ಸಹ ಧೈರ್ಯ ಸಹ ಇರುವುದಿಲ್ಲ ಎಂದರು.

ಪಾಕಿಸ್ತಾನವು ಕಾರ್ಗಿಲ್ ನಂತಹ ಮತ್ತೊಂದು ಯುದ್ಧಕ್ಕೆ ಮುಂದಾಗುವುದಿಲ್ಲ ಎಂದು ಭಾವಿಸಿದ್ದೇನೆ. ಅವರಿಗೆ ಯುದ್ಧದ ಭೀಕರತೆ ಮುಟ್ಟಿದೆ. ಪಾಕಿಸ್ತಾನವು ಮುಂಬರುವ ದಿನಗಳಲ್ಲಿ ಹಾಗೂ ವರ್ಷಗಳಲ್ಲಿ ಒಳನುಸುಳುವಿಕೆಯನ್ನು ಪ್ರಯತ್ನಿಸಲು ಧೈರ್ಯ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.