ಕಾಲು ಕಳೆದುಕೊಂಡ ರಾಜೇಶ್ ಕುಲಾಲ್ ಗೆ ಆರ್ಥಿಕ ನೆರವು : ಕಾಪು ಕುಲಾಲ ಯುವ ವೇದಿಕೆ , ಕಾಪು ಕುಲಾಲ ಸಂಘದಿಂದ ನೆರವಿನ ಸಹಾಯಹಸ್ತ – Vishwanews24

Featured, ಉಡುಪಿ

ಕಾಲು ಕಳೆದುಕೊಂಡ ರಾಜೇಶ್ ಕುಲಾಲ್ ಗೆ ಆರ್ಥಿಕ ನೆರವು : ಕಾಪು ಕುಲಾಲ ಯುವ ವೇದಿಕೆ , ಕಾಪು ಕುಲಾಲ ಸಂಘದಿಂದ ನೆರವಿನ ಸಹಾಯಹಸ್ತ

ಕಾಪು :ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲು ಕಳೆದುಕೊಂಡ ಕಾಪುವಿನ ಎಲ್ಲೂರು ಗ್ರಾಮ ಪಂಚಾಯತ್ ಅದಮಾರು ನಿವಾಸಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಸ್ಕೃತ ವರದಿ ಬಂದಿತ್ತು. ಈ ವರದಿಗೆ ತಕ್ಷಣ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಪು ಕುಲಾಲ ಸಂಘವು ಬಡ ಕುಟುಂಬಕ್ಕೆ‌ಸಹಾಯಹಸ್ತ ಚಾಚುವ ಭರವಸೆಯನ್ನು ನೀಡಿತ್ತು. ಈ ನಿಮಿತ್ತ ಸಹೃದಯಿ ದಾನಿಗಳಾದ ತಮ್ಮೆಲ್ಲರ‌ ಬೆಂಬಲದಿಂದ ಒಟ್ಟುಗೂಡಿದ ಸಹಾಯಧನವನ್ನು ದಿನಾಂಕ 25/09/2023ನೇ ಸೋಮವಾರ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಹನಿ‌ ಹನಿ ಸೇರಿ ಹಳ್ಳ ಎನ್ನುವಂತೆ ತಮ್ಮೆಲ್ಲರ‌ ಸಹಾಯಧನವೇ ಒಟ್ಟುಗೂಡಿ ರೂ      75, 000 ನ್ನು ಅವರ ಮನೆಗೆ ತೆರಳಿ ನೀಡಲಾಯಿತು .

ಉಡುಪಿ: ನಾಪತ್ತೆಯಾದ ಯುವಕ ಮನೆಯ ಸಾಕುನಾಯಿಯೊಂದಿಗೆ ಪತ್ತೆ – ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ – Vishwanews24

ಹಣ ಹಸ್ತಾಂತರ ಸಂದರ್ಭ ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್, ಕಾಪು ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ, ಆಸರೆ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸತೀಶ್ ಕುಲಾಲ್ ಕಡಿಯಾಳಿ, ಸರ್ವಜ್ಞ ಆಸರೆ ಕಿರಣ ಬಳಗದ ಪ್ರಭಾಕರ್ ಇನ್ನ, ನಿವೃತ್ತ ಸೈನಿಕರು ಬಾಲಕೃಷ್ಣ ಭಂಡಾರಿ,ಬೊಗ್ಗು ಮೂಲ್ಯ ಬೇಲಾಡಿ, ಶಂಕರ ಮೂಲ್ಯ ಬೇಲಾಡಿ, ಸಂತೋಷ್ ಶೆಟ್ಟಿ ಬರ್ಪಾಣಿ, ಸುಮಂತ್ ಕುಲಾಲ್ ಪಾದೂರು, ರವೀಂದ್ರ ಕುಲಾಲ್ ಪಣಿಯೂರು, ಕಾಂತಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಕುಲಾಲ್ ಬೇಲಾಡಿ,ಮಹೇಶ್ ಕುಲಾಲ್ ಬೇಲಾಡಿ,ಸತೀಶ್ ಕುಲಾಲ್ ಉಳಿಯಾರು ಉಪಸ್ಥಿತರಿದ್ದರು..

ನೆರವು ನೀಡುವವರು ರಾಜೇಶ್ ಕುಲಾಲ್ ಅವರ ಪತ್ನಿ ವಿನೋದ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.

ಬ್ಯಾಂಕ್ ಖಾತೆ ಮಾಹಿತಿ ಹೀಗಿದೆ:

Contact Number::9008559310
Google pay number
9008559310
Bank detail CANARA BANK Mudharangadi.
NAME: Vinoda
A/c number: 110106025209
IFSC: CNRB0000638.

ಉಡುಪಿ: ಲಾರಿ ಮಾಲಿಕರ ಕಟ್ಟಡ ಸಾಮಾಗ್ರಿ ಸಾಗಾಟ ಬಂದ್ – ಬಡ ಕೂಲಿ ಕಾರ್ಮಿಕರ ಹೊಟ್ಟೆಗೆ ಒಡೆಯಲು ಮುಂದಾದ ಸರಕಾರ  : ಯಶ್ಪಾಲ್ ಸುವರ್ಣ ಆಕ್ರೋಶ – Vishwanews24

Leave a Reply