ಕಾಲೇಜಿನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆ ವೇಳೆ ಹೃದಯಾಘಾತ : ವಿದ್ಯಾರ್ಥಿನಿ ಮೃತ್ಯು – Vishwanews24

Featured, ರಾಜ್ಯ ನ್ಯೂಸ್

ಕಾಲೇಜಿನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆ ವೇಳೆ ಹೃದಯಾಘಾತ : ವಿದ್ಯಾರ್ಥಿನಿ ಮೃತ್ಯು

ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಧಾರವಾಡ ಮೂಲದ ವಿದ್ಯಾರ್ಥಿನಿ ಸಂಗೀತಾ(17) ಮೃತ ವಿದ್ಯಾರ್ಥಿನಿ, ಸಂಗೀತಾ ಪ್ರಥಮ ಪಿಯು ತಂಡದಲ್ಲಿ ಆಕೆ ಆಡುತ್ತಿದ್ದಳು. ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ಸಂಗೀತಾ ವಾಸವಿದ್ದಳು. ಕಬಡ್ಡಿ ಆಡುತ್ತಿರುವಾಗಲೇ ಕುಸಿದುಬಿದ್ದ ಸಂಗೀತಾಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಂಗೀತಾ ಮೃತಪಟ್ಟಿದ್ದರು.

 

 

Leave a Reply