ಕಾಶ್ಮೀರಕ್ಕಾಗಿ ಯಾವುದೇ ಬಲಿದಾನಕ್ಕೂ ನಾವು ಸಿದ್ಧ : ಪಾಕ್ ಸೇನಾ ಮುಖ್ಯಸ್ಥ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ 370 ನೇ ವಿಧಿ ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಯುದ್ಧ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಪಾಕಿಸ್ತಾನ ಇದೀಗ ಮತ್ತೆ ಬೆದರಿಕೆ ಹಾಕಿದೆ.

ಭಾರತ ಕಾಶ್ಮೀರದಲ್ಲಿ ದೌರ್ಜನ್ಯವೆಸಗುತ್ತಿದ್ದು, ಹಿಂದುತ್ವ ಹೇರುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಹೇಳಿದ್ದಾರೆ.

ಹಿಂದುತ್ವ ಹಾಗೂ ದೌರ್ಜನ್ಯಗಳಿಗೆ ಕಾಶ್ಮೀರ ಬಲಿಪಶುವಾಗುತ್ತಿದೆ. ಕಾಶ್ಮೀರ ಪಾಕಿಸ್ತಾನದ ಅಜೆಂಡಾವಾಗಿದೆ. ಪ್ರಸ್ತುತ ಭಾರತ ಸರ್ಕಾರ ಕಾಶ್ಮೀರ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರ ನಮಗೆ ಸವಾಲಾಗಿದೆ. ಕಾಶ್ಮೀರವನ್ನು ಒಬ್ಬಂಟಿಯಾಗಿ ಪಾಕಿಸ್ತಾನ ಎಂದಿಗೂ ಬಿಡುವುದಿಲ್ಲ. ಕಟ್ಟಕಡೆಯ ಯೋಧ, ಗುಂಡು ಹಾಗೂ ಉಸಿರು ಇರುವವರೆಗೂ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಕಾಶ್ಮೀರಕ್ಕಾಗಿ ಪಾಕಿಸ್ತಾನ ಸೇನೆ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ. ಯುದ್ಧದ ಮೋಡ ಹಾಗೂ ಆತಂಕ ವಾತಾವರಣ ಸೃಷ್ಟಿಯಾಗಿದೆ. ಆದರೆ, ನಾವು ಶಾಂತಿಯನ್ನು ಬಯಸುತ್ತಿದ್ದೇವೆ. ಇಂದು ಕಾಶ್ಮೀರ ಆತಂಕದಲ್ಲಿ ಸುಡುತ್ತಿದೆ. ನಿಮ್ಮೊಂದಿಗೆ ನಾವಿದ್ದೇವೆಂಬುದನ್ನು ನಾನು ಕಾಶ್ಮೀರ ಜನತೆಗೆ ಭರವಸೆ ನೀಡುತ್ತೇನೆ. ಕಾಶ್ಮೀರಕ್ಕಾಗಿ ಯಾವುದೇ ಬಲಿದಾನಕ್ಕೂ ನಾವು ಸಿದ್ಧರಿದ್ದೇವೆಂದು ಹೇಳಿಕೊಂಡಿದ್ದಾರೆ.