ಕಿನ್ನಿಗೋಳಿ : ಕ್ಷುಲ್ಲಕ ಕಾರಣಕ್ಕೆ 5ನೇ ತರಗತಿ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ -Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಕಮ್ಮಾಜೆ ನಿವಾಸಿ ಶ್ರೀಲತಾ ಅವರ ಪುತ್ರಿ ಧ್ರುವಿ (10) ಬುಧವಾರ ಮನೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆ ಕಿನ್ನಿಗೋಳಿಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಳು. ಐಕಳ ಕಿರೆಂ ಚರ್ಚ್‌ನಲ್ಲಿ ವಾರ್ಷಿಕ ಹಬ್ಬ ಇದ್ದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು. ಮನೆಯಲ್ಲಿ ಅಜ್ಜಿ ಪದ್ಮಿನಿ ಮಾತ್ರ ಇದ್ದು, ಬಾಲಕಿ ಟಿ.ವಿ. ನೋಡುತ್ತಿದ್ದಳು. ಬಳಿಕ ವಿದ್ಯುತ್‌ ಹೋಗಿದ್ದು, ಆಗ ಓದುವಂತೆ ಆಕೆಗೆ ಹೇಳಲಾಗಿತ್ತು.

ಅಜ್ಜಿ ಪರೀಕ್ಷೆಗೆ ಓದಲು ಹೇಳಿದ ಕಾರಣಕ್ಕೆ ಕೋಪಗೊಂಡ ಧ್ರುವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.