ಕುಂದಗೋಳ ಉಪ ಚುನಾವಣೆ: ಪ್ರಚಾರದ ವೇಳೆ ಡಿ.ಕೆ ಶಿವಕುಮಾರ್ ಕಣ್ಣೀರು -Vishwanews24
ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಈ ವೇಳೆ ಜಲಸಂನ್ಮೂಲ ಸಚಿವ ಡಿ.ಕೆ ಶಿವಕುಮಾರ್ ದಿವಗಂತ ಸಿ.ಎಸ್ ಶಿವಳ್ಳಿ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಇಂದು ಇಂಗಳಗಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ಪರ ಪ್ರಚಾರ ನಡೆಸಿದ ಡಿಕೆಶಿ, ಶಿವಳ್ಳಿ ಅವರು ಜಾತಿ ನೋಡದೆ ಎಲ್ಲರ ಸೇವೆ ಮಾಡಿದರು. ಕೊನೆಯವರೆಗೂ ಬಡವರ ಪರ ಕೆಲಸ ಮಾಡಿದರು. ನಿಮ್ಮ ಮುಂದೆ ನಿಂತು ಮತಯಾಚನೆ ಮಾಡುತ್ತಿದ್ದೇನೆ. ಇದು ಶಿವಳ್ಳಿ ಚುನಾವಣೆಯಲ್ಲ. ನಿಮ್ಮ ಚುನಾವಣೆ. ನಿಮ್ಮೆಲ್ಲರ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ. ಶಿವಳ್ಳಿಯನ್ನು ಉಳಿಸಿಕೊಳ್ಳಿ ಎಂದು ಅಳುತ್ತಲೇ ಹೇಳಿದರು.
ಶಿವಳ್ಳಿ ಅವರ ನಿಧನದ ನಂತರ ಕುಸುಮಕ್ಕ ನಮ್ಮ ಮನೆಗಾಗಲಿ, ದಿನೇಶ್ ಗುಂಡೂರಾವ್ ಅವರ ಮನೆಗಾಗಲೀ ಬಂದು ಚುನಾವಣೆಯಲ್ಲಿ ಸೀಟು ಕೊಡಿ ಎಂದು ಕೇಳಲಿಲ್ಲ. ಕಾರ್ಯಕರ್ತರೇ ನಿರ್ಧರಿಸಿದ್ದಾರೆ. ಕುಸುಮಕ್ಕನನ್ನು ಗೆಲ್ಲಿಸಿಕೊಡಿ ,ಅವಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದು ಅವರು ಭಾವುಕರಾದರು.
ನನ್ನ ಕ್ಷೇತ್ರವನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೋ, ಹಾಗೇ ಕುಂದಗೋಳವನ್ನೂ ನೋಡಿಕೊಳ್ಳುತ್ತೇನೆ. ಈಗ ಚುನಾವಣೆ ಬಂದಿದೆ ವೋಟು ಕೊಡಿ ಎಂದು ಕಣ್ಣಿರು ಹಾಕಿಲ್ಲ, ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಶಿವಳ್ಳಿ ಕಳೆದು ಕೊಂಡು ನನಗೆ ನೋವಾಗಿದೆ ಹೀಗಾಗಿ ನನಗೆ ಅಳು ಬಂದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
