ಕುಂದಾಪುರ: ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಸಾವು – ಮೂವರ  ರಕ್ಷಣೆ – Vishwanews24

Featured, ಉಡುಪಿ

ಕುಂದಾಪುರ: ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಸಾವು – ಮೂವರ  ರಕ್ಷಣೆ

ಕುಂದಾಪುರ: ಮದಗದಲ್ಲಿ ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ಕಂದಾವರ ಗ್ರಾಮದ ಮೂಡ್ಲಕಟ್ಟೆಯಲ್ಲಿ ಸಂಭವಿಸಿದೆ‌.

ಭರತ್ ಶೆಟ್ಟಿಗಾರ್ (16) ಹಾಗೂ ರಾಜೇಂದ್ರ ಶೆಟ್ಟಿಗಾರ್ (27) ಸಾವನ್ನಪ್ಪಿದವರು. ಸೋಮವಾರ ಸಂಜೆ ಕಂದಾವರ – ಮೂಡ್ಲಕಟ್ಟೆಯ ಸಮೀಪದ ಮದಗದಲ್ಲಿ ರಾಜೇಂದ್ರ, ಭರತ್ ಹಾಗೂ ಇನ್ನು ಮೂವರು ಬಾಲಕರು ಈಜಲು ನೀರಿಗಿಳಿದಿದ್ದು, ಈ ವೇಳೆ ನಾಲ್ವರು ನೀರಲ್ಲಿ ಮುಳುಗುತ್ತಿದ್ದುದನ್ನು ಕಂಡ ರಾಜೇಂದ್ರ ಅವರು ಮೂವರನ್ನು ರಕ್ಷಿಸಿದ್ದು, ಆದರೆ ಭರತ್ ನನ್ನು ರಕ್ಷಿಸುವಷ್ಟರಲ್ಲಿ ತಾನು ಸಹ ಈಜಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಶಂಕರನಾರಾಯಣ ಸಮೀಪದ ನಿವಾಸಿ ಗಣೇಶ್ ಶೆಟ್ಟಿಗಾರ್ ಅವರ ಪುತ್ರ ಭರತ್ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದು, ಅಜ್ಜಿಮನೆಗೆ ಬಂದಿದ್ದರು. ರಾಜೇಂದ್ರ ಅವರು ಶಂಕರನಾರಾಯಣದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು ಎಂದು ತಿಳಿದು ಬಂದಿದೆ.

ಉಡುಪಿ: ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಗೃಹೋಪಯೋಗಿ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ಯುವತಿಗೆ ವಂಚನೆ – Vishwanews24

ಕುಂದಾಪುರ ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೇತ್ತುವಲ್ಲಿ ಸಹಕರಿಸಿದರು.
ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply