ಕುಂದಾಪುರ: ಕಾರಿನ ಬಾನೆಟ್ ಒಳಗೆ 12 ಅಡಿ ಉದ್ದದ ಬೃಹತ್  ಹೆಬ್ಬಾವು ಪತ್ತೆ – vishwanews24

Featured, ಉಡುಪಿ

ಕುಂದಾಪುರ: ಕಾರಿನ ಬಾನೆಟ್ ಒಳಗೆ 12 ಅಡಿ ಉದ್ದದ ಬೃಹತ್  ಹೆಬ್ಬಾವು ಪತ್ತೆ

ಕುಂದಾಪುರ : ಇಲ್ಲಿಗೆ ಸಮೀಪದ ನಾಡ ಗ್ರಾಮದ ಕೋಣ್ಕಿ ಚಂದ್ರ ಪ್ರಕಾಶ್ ಶೆಟ್ಟಿ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

ಬಡಾಕೆರೆ ಜೋಯಿಸರ ಬೆಟ್ಟು ಚಂದ್ರಪ್ರಕಾಶ ಶೆಟ್ಟಿ ಅವರು ಎಂದಿನಂತೆ ತಮ್ಮ ಹೋಂಡಾ ಅಮೇಜ್ ಕಾರನ್ನು ಚಲಾಯಿಸುತ್ತಾ ಬರುತ್ತಿದ್ದಾಗ ದಾರಿ ಮಧ್ಯೆ ಬಾನೆಟ್ ಒಳಗಿನಿಂದ ಜೊರಾದ ಶಬ್ಧ ಕೇಳಿಸಿದೆ. ತಕ್ಷಣ ಕಾರು ನಿಲ್ಲಿಸಿ ಬಾನೆಟ್ ಎತ್ತಿ ನೋಡಿದಾಗ ಸುಮಾರು 12 ಅಡಿ ಉದ್ದದ ಹೆಬ್ಬಾವು ಸಿಕ್ಕಿ ಹಾಕಿಕೊಂಡಿರುವುದು ಪತ್ತೆಯಾಗಿದೆ.

ಪುತ್ತೂರು: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ – vishwanews24

ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಸತತ ಕಾರ್ಯಾಚರಣೆ ಮೂಲಕ ಕಾರಿನ ಬಾನೆಟ್ ಒಳಗಿರುವ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ, ಅನಿಲ್, ಹರೀಶ್ ಪೂಜಾರಿ, ಉದಯ, ಜನಪ್ರತಿನಿಧಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಉಪಚುನಾವಣೆ : ಕಾಂಗ್ರೆಸ್‌ನಿಂದ ಉಡುಪಿ ಜಿಲ್ಲೆಯ ಅಭ್ಯರ್ಥಿ ಕಣಕ್ಕೆ: ಮಂಜುನಾಥ್ ಭಂಡಾರಿ – vishwanews24

Leave a Reply