ಕುಂದಾಪುರ: ನಾನು ಹಿಜಾಬ್‌ನ್ನು ಸಮವಸ್ತ್ರ ಆಧಾರಿತವಾಗಿ ನೋಡಿದ್ದೇ ಹೊರತು ಧರ್ಮಾಧಾರಿತವಾಗಿ ಮಾಡಿಲ್ಲ : ಅಲಿಯಾ ಅಸ್ಸಾದಿಗೆ ರಘುಪತಿ ಭಟ್ ತಿರುಗೇಟು – vishwanews24
ಕುಂದಾಪುರ: ನಾನು ಹಿಜಾಬ್‌ನ್ನು ಸಮವಸ್ತ್ರ ಆಧಾರಿತವಾಗಿ ನೋಡಿದ್ದೇ ಹೊರತು ಧರ್ಮಾಧಾರಿತವಾಗಿ ಮಾಡಿಲ್ಲ : ಅಲಿಯಾ ಅಸ್ಸಾದಿಗೆ ರಘುಪತಿ ಭಟ್ ತಿರುಗೇಟು
ಕುಂದಾಪುರ: ನಾನು ಹಿಜಾಬ್‌ನ್ನು ಸಮವಸ್ತ್ರ ಆಧಾರಿತವಾಗಿ ನೋಡಿದ್ದೇ ಹೊರತು ಧರ್ಮಾಧಾರಿತವಾಗಿ ಮಾಡಿಲ್ಲ ಎಂದು ಹಿಜಾಬ್ ಪರ ಹೋರಾಟಗಾರ್ತಿ ಅಲಿಯಾ ಅಸ್ಸಾದಿಗೆ ಮಾಜಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.
ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾಗುವ ಮೊದಲು ಆ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿತ್ತು. ಆ ವಿದ್ಯಾರ್ಥಿನಿ ಕೆಲವು ಸಂಘಟನೆಗಳ ಪ್ರಭಾವದಿಂದ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ವಿಚಾರದಲ್ಲಿ ವಿವಾದ ಸೃಷ್ಟಿಯಾಯಿತು. ಆಕೆ ಕಾಲೇಜಿನ ಶಿಸ್ತು ತಪ್ಪಿದ್ದರಿಂದ ಹೀಗೆಲ್ಲಾ ಆಯಿತು ಎಂದರು.
ನಾನು ಮೂರು ಬಾರಿ ಶಾಸಕನಾಗಿ ಜನರ ಮನ್ನಣೆ ಗಳಿಸಿದ್ದೇನೆ. ಆಕೆ ಒಳ್ಳೆಯ ಶಿಕ್ಷಣ ಕಲಿಯುವಂತೆ ಹಾರೈಸುತ್ತೇನೆ. ಶಿಕ್ಷಣದಿಂದ ಧರ್ಮಾಂದತೆ, ದೇಶ ದ್ರೋಹದ ಭಾವನೆ ಬರಲ್ಲ ಎಂದು ಅವರು ತಿಳಿಸಿದರು.
