ಕುಂದಾಪುರ : ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು ಹಿಂದೂ ಸಿದ್ದಾಂತವನ್ನು : ಬಿಜೆಪಿ ವಿರುದ್ಧ ಮುತಾಲಿಕ್ – Vishwanews24
ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ ..
ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು ಹಿಂದೂ ಸಿದ್ದಾಂತವನ್ನು..
ಹಿಂದೂಗಳಿಂದಲೇ ಗೆದ್ದು ಬಂದವರು ನೀವು ಹಿಂದೂಗಳನ್ನೇ ನೀವು ತಡೆಯುತ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತೆ..
ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತೆ..
ಕುಂದಾಪುರ: ರಾಜ್ಯ ಸರಕಾರದ ವಿರುದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಎಲ್ಲಾ ಹೋರಾಟದ ಲಾಭ ಬಿಜೆಪಿಗೆ ಹೋಗುತ್ತಿದೆ. ಆದರೆ ಬಿಜೆಪಿಯವರು ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ’ ಎಂದು ಗುಡುಗಿದ್ದಾರೆ.
ಕುಂದಾಪುರದಲ್ಲಿ ಮಾತನಾಡಿದ ಅವರು, ಕೋಲಾರ, ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು. ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು, ಬಿಜೆಪಿ ಇದ್ದಾಗಲೂ ಬ್ಯಾನ್, ಕೇಸು ಜೈಲು, ಬಿಜೆಪಿ ನನ್ನನ್ನು ಬ್ಯಾನ್ ಮಾಡುತ್ತದೆ ಅಂದ್ರೆ ಹೇಗೆ? ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು ಹಿಂದೂ ಸಿದ್ದಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ.
ಹಿಂದೂಗಳಿಂದಲೇ ಗೆದ್ದು ಬಂದವರು ನೀವು ಹಿಂದೂಗಳನ್ನೇ ನೀವು ತಡೆಯುತ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತೆ. ದೇಶದ ಹಿತಕ್ಕಾಗೆ ಹಿಂದೂ ಸಂಘಟಕರು ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜನರಿಗೆ, ದೇಶಕ್ಕೆ ಯಾವುದು ಹಿತ, ಯಾವುದು ಮಾರಕ ಎನ್ನುವುದು ಗೊತ್ತಾಗಿದೆ. ಹಿಂದೂ ಸಂಘಟನೆಗಳಿಂದ ಸಮಾಜ ಜಾಗೃತಿ ಯಾಗಿದೆ. ಸಮಾಜಕೊಂದು ಕಲ್ಪನೆ, ದೃಷ್ಟಿಕೋನ ಸಿಕ್ಕಿದೆ. ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿ ಎಂದು ಪುನರುಚ್ಚರಿಸಿದ್ದಾರೆ.
ಅಕ್ಷಯ ತೃತೀಯ ಹಿಂದುಗಳ ಹಬ್ಬ. ಹಿಂದೂಗಳ ಹಬ್ಬದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತೆ. ಹಿಂದೂಸ್ತಾನದ ಸುರಕ್ಷತೆಗೆ ಇದು ಅಗತ್ಯ. ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ. ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ. ಮುಂದಿನ ದಿನ ಹಲಾಲ್ ಕಟ್ ಮಾಂಸವನ್ನು ಹಿಂದೂಗಳು ಖರೀದಿ ಮಾಡುವುದಿಲ್ಲ.
ಇದೇ ಮಾದರಿಯ ಹೋರಾಟ ಈ ವಿಚಾರದಲ್ಲೂ ನಡೆಯಲಿದೆ. ಕೇರಳ ಮೂಲದ ಜ್ಯುವೆಲ್ಲರಿ ಕಂಪೆನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿವೆ ಎಂದು ಹೇಳಿದ್ದಾರೆ.
