ಕುಂದಾಪುರ: ರಾಜ್ಯ ಮಟ್ಟದ ಅಬಾಕಸ್-ವೇದಿಕ್ ಮ್ಯಾಥ್ಸ್ ಸ್ಪರ್ಧೆ : ಪೃಥ್ವಿಕ್ ಪೂಜಾರಿ ತೃತಿಯ ಸ್ಥಾನ – vishwanews24
ಕುಂದಾಪುರ: ರಾಜ್ಯ ಮಟ್ಟದ ಅಬಾಕಸ್-ವೇದಿಕ್ ಮ್ಯಾಥ್ಸ್ ಸ್ಪರ್ಧೆ :ಪೃಥ್ವಿಕ್ ಪೂಜಾರಿ ತೃತಿಯ ಸ್ಥಾನ
ಕುಂದಾಪುರ: ಚಿತ್ರದುರ್ಗ ಜಿಲ್ಲೆಯ ಮುರುಗಾ ಮಠದಲ್ಲಿ ಐಡಿಯಲ್ ಪ್ಲೇ ಅಬಾಕಸ್ ಆ್ಯಂಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ ರಾಜ್ಯಮಟ್ಟ ಅಬಾಕಸ್ ವೇದಿಕ್ ಮ್ಯಾಥ್ಸ್ ಸ್ಪರ್ಧೆಯಲ್ಲಿ ಗ್ರೀನ್ ವ್ಯಾಲಿ ಇಂಟರ್ನ್ಯಾಷನಲ್ ಶಾಲೆಯ ವಿಧ್ಯಾರ್ಥಿ ಪೃಥ್ವಿಕ್ ಸಿ ಪೂಜಾರಿ (ಎರಡನೇ ತರಗತಿ) ತೃತೀಯ ಸ್ಥಾನ ಪಡೆದಿದ್ದಾರೆ.
ದಿನಾಂಕ 27 ಅಕ್ಟೋಬರ್ ಕಾರ್ಯಕ್ರಮ ನಡೆದಿದ್ದು ಇಲ್ಲಿ ಇವರು ಭಾಗವಹಿಸಿ ತೃತೀಯ ಸ್ಥಾನ ಪಡೆಯುವ ಮುಖೇನ ಬೈಂದೂರು ತಾಲೂಕಿನ ಕೀರ್ತಿಗೆ ಪಾತ್ರರಾಗಿದ್ದಾರೆ.
ಪೃಥ್ವಿಕ್ ಸಿ ಪೂಜಾರಿ ಶ್ರೀಮತಿ ಕವಿತಾ ಹಾಗೂ ಚೇತನ್ ಪೂಜಾರಿಯವರ ಪುತ್ರ .
