ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ತಮಿಳು ನಟ ವಿಶಾಲ್ – Vishwanews24

Featured, ದಕ್ಷಿಣ ಕನ್ನಡ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ತಮಿಳು ನಟ ವಿಶಾಲ್ 

ಸುಬ್ರಹ್ಮಣ್ಯ,: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದು, ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದಾರೆ.

ಶನಿವಾರ ಮುಂಜಾನೆ ಕುಕ್ಕೆ ಸುಬ್ರಹ್ಮಣ್ಯಸನ್ನಿಧಿಯಲ್ಲಿ ನಟ ವಿಶಾಲ್, ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದಾರೆ. ಪಂಚೆ, ಶಲ್ಯ ಧರಿಸಿದ್ದ ಅವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.

ಸ್ನೇಹಿತರ ಜೊತೆ ಆಗಮಿಸಿದ ವಿಶಾಲ್ ದೇವರ ದರ್ಶನ ಪಡೆದು ಪೂಜೆ ನೆರವೇರಿಸಿದ್ದಾರೆ. ಹೊಸ ಸಿನಿಮಾಗಾಗಿ ನಿರ್ದೇಶನಕ್ಕೂ ಕೈ ಹಾಕಿದ ವಿಶಾಲ್ `ಲಾಠಿ’ ಚಿತ್ರದ ಮೂಲಕ ಖಡಕ್ ಆಫೀಸರ್ ಆಗಿ ತೆರೆಗೆ ಅಪ್ಪಳಿಸುತ್ತಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ತಮಿಳು ನಟ ವಿಶಾಲ್ – Vishwanews24

ಬೀದರ್ : ಉದ್ಯೋಗಕ್ಕಾಗಿ ಆನ್‍ಲೈನ್‍ನಲ್ಲಿ ಹಣ ಹೂಡಿಕೆ.. ವಂಚನೆಗೆ ಒಳಗಾದ ಉಪನ್ಯಾಸಕಿ ಮನನೊಂದು ಆತ್ಮಹತ್ಯೆ – Vishwanews24

Leave a Reply