ಕುತಂತ್ರದಿಂದ ಅಧಿಕಾರದ ಗದ್ದುಗೆಯೇರಿದ ಬಿಜೆಪಿ, ರಾಜ್ಯವನ್ನು ಅದೋಗತಿಗೆ ತಂದು ನಿಲ್ಲಿಸಿದೆ : ಸುನಿಲ್ ಕುಮಾರ್ ಬಜಾಲ್ -Vishwanews24
ಮಂಗಳೂರು: ಕಟ್ಟಡ ಕಾರ್ಮಿಕರ ಪರವಾಗಿ ಧೃಢವಾಗಿ ನಿಂತ ದಕ್ಷ ಅಧಿಕಾರಿಣಿ ಶ್ರೀಮತಿ ರೋಹಿಣಿ ಸಿಂಧೂರಿಯವರನ್ನು ಏಕಾಏಕಿ ವರ್ಗಾವಣೆ ಮಾಡಿದ ರಾಜ್ಯ ಸರಕಾರದ ಕುತಂತ್ರವನ್ನು ಖಂಡಿಸಿ ಸಿಐಟಿಯು ನೇತ್ರತ್ವದಲ್ಲಿ ನಗರದಲ್ಲಿಂದು ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ” ಕಟ್ಟಡ ಕಾರ್ಮಿಕರ ನೊಂದಾವಣೆ ಶುಲ್ಕ ಹಾಗೂ ಸೆಸ್ ಮೂಲಕ ಸಂಗ್ರಹ ವಾಗುತ್ತಿರುವ ಕೋಟ್ಯಾಂತರ ರೂಪಾಯಿ ಹಣವಿರುವ ಇಲಾಖೆಗೆ ಇಷ್ಟವರೆಗೆ ಪ್ರಮುಖ ಅಧಿಕಾರಿಯೊಬ್ಬರನ್ನು ನೇಮಕ ಮಾಡದಿರುವ ಸರಕಾರದ ಕ್ರಮವೇ ಸಂಶಯಾಸ್ಪದವಾಗಿದೆ. ಕಳೆದ 5 ತಿಂಗಳ ಹಿಂದೆ ಕಾರ್ಯದರ್ಶಿ ಯಾಗಿ ನೇಮಕಗೊಂಡ ಶ್ರೀಮತಿ ರೋಹಿಣಿ ಸಿಂಧೂರಿಯವರು ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿದಿರುತ್ತಾರೆ.ಕಟ್ಟಡ ಕಾರ್ಮಿಕರಿಗಾಗಿ ಮೀಸಲಿರಿಸಿದ ಹಣವನ್ನು ತನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಅನ್ಯ ಕೆಲಸಗಳಿಗೆ ಉಪಯೋಗಿಸಲು ಬಿಡಲಾರೆ ಎಂದು ಹೇಳಿರುವುದು ನಿಜಕ್ಕೂ ಶ್ಲಾಘನೀಯ ವಾಗಿದೆ” ಎಂದು ಹೇಳಿದರು
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ,ಜಯಂತಿ ಶೆಟ್ಟಿ,ದಿನೇಶ್ ಶೆಟ್ಟಿ,ಇತರ ಸಂಘಟನೆಗಳ ನಾಯಕರಾದ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಭಾರತಿ ಬೋಳಾರ,ತಿಮ್ಮಯ್ಯ ಕೊಂಚಾಡಿ,ಕ್ರಷ್ಣಪ್ಪ ಕೊಂಚಾಡಿ ಮುಂತಾದವರು ಹಾಜರಿದ್ದರು.
