ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು; ನಾನು ಯಾರನ್ನೂ ದ್ವೇಷ ಮಾಡಲ್ಲ : ಡಿ.ಕೆ.ಶಿ -Vishwanews24

Featured, ರಾಜ್ಯ ನ್ಯೂಸ್

ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು; ನಾನು ಯಾರನ್ನೂ ದ್ವೇಷ ಮಾಡಲ್ಲ : ಡಿ.ಕೆ.ಶಿ -Vishwanews24

ಬೆಂಗಳೂರು: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು. ನಾನು ಯಾರನ್ನೂ ದ್ವೇಷ ಮಾಡಲ್ಲ, ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಬಂಡೆನೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ. ಉಪಯೋಗಿಸಿಕೊಂಡಿದ್ದಾರೆ ಬಿಡಿ ಎಂದು ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಇಸ್ ಮೈ ಗುಡ್ ಫ್ರೆಂಡ್, ಟುಡೇ ಆಲ್ಸೋ… ಟುಮಾರೋ ಆಲ್ಸೋ…’ ಎಂದು ಕುಮಾರಸ್ವಾಮಿ ಕುರಿತು ಡಿಕೆಶಿ ಹೇಳಿದ್ದಾರೆ. ‘ಸಂಪದ್ಭರಿತ ಖಾತೆ ಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರ ಇರಬೇಕು ಎಂದು ಡಿಕೆಶಿ ಬಯಸಿದ್ರು’ ಎಂದಿದ್ದ ಎಚ್​ಡಿಕೆ ಮಾತಿಗೆ ಸದಾಶಿವನಗರ ನಿವಾಸದಲ್ಲಿ ತಿರುಗೇಟು ನೀಡಿದ ಶಿವಕುಮಾರ್​, ‘ಅವರನ್ನೇಕೆ ಹಳೇ ದೋಸ್ತಿ ಅಂತೀರಾ? ನಾನು ದ್ವೇಷ ಮಾಡಲ್ಲ, ಎಲ್ಲ ಬಿಟ್ಟುಬಿಟ್ಟಿದ್ದೀನಿ. ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು’ ಎಂದರು.

ನಾನು ಬಂಡೆಯೂ ಅಲ್ಲ, ಮರಳೂ ಅಲ್ಲ, ಜಲ್ಲಿಯೂ ಅಲ್ಲ. ಆದರೂ ಉಪಯೋಗಿಸಿಕೊಂಡಿದ್ದಾರೆ ಎಂದ ಡಿಕೆಶಿ, ನನಗ್ಯಾಕೆ ನೋವಾಗಬೇಕು? ಜೆಡಿಎಸ್ ಬಗ್ಗೆ ನಾನೇಕೆ ಮಾತಾಡಲಿ? ಅವರದ್ದು ಒಂದು ಪಕ್ಷ, ಅವರನ್ನೇಕೆ ಡಿಗ್ರೇಡ್ ಮಾಡೋದು ಹೇಳಿ… ಸಿಎಂ ಮತ್ತು ಅವರ ಅಡ್ಜೆಸ್​ಮೆಂಟ್ ಏನೇನಿದೆಯೋ ಗೊತ್ತಿಲ್ಲ ಎಂದು ಮಾತಿನಲ್ಲೇ ತಿವಿದರು.

ಸರ್ಕಾರದ ಬಳಿ ಪಂಡಿತರಿದ್ದಾರೆ, ಬಹಳ ದೊಡ್ಡ ದೊಡ್ಡ ತಜ್ಞರಿದ್ದಾರೆ. ಸರ್ಕಾರ ನಮ್ಮ ಮಾತು, ಸಲಹೆಯನ್ನಂತೂ ಕೇಳುವುದಿಲ್ಲ. ಏನೇ ಗಲಾಟೆಯಾಗಲಿ ಕಾಂಗ್ರೆಸ್ ನವರೇ ಕಾರಣ ಎನ್ನುತ್ತಾರೆ. ಸರ್ಕಾರಕ್ಕೆ ಕೋವಿಡ್ ವಿಚಾರದಲ್ಲೂ ಹಿಡನ್ ಅಜೆಂಡಾ ಇದೆ. ನಾನು ತಜ್ಞರ ಜೊತೆ ಚರ್ಚೆ ಮಾಡಿ ಮುಂದೆ ಮಾತನಾಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.