ಕೇಸರಿ ಪಾಳಯದ ವಿರುದ್ಧ ಹೋರಾಡಲು, ಜೆಡಿಎಸ್ ಜೊತೆ ಸೇರುವುದು ಅನಿವಾರ್ಯ : ಸಿದ್ದರಾಮಯ್ಯ

Featured, ಜಿಲ್ಲೆ
ಮೈಸೂರು: ಬಿಜೆಪಿ ವಿರುದ್ಧ ಹೋರಾಡಲು ಜೆಡಿಎಸ್ ಜೊತೆಗೆ ಸಾಗುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಪಕ್ಷದೊಂದಿಗೆ ಕಾರ್ಯ ನಿರ್ವಹಿಸುವುದು ಕಷ್ಟ. ಆದರೆ, ಕೇಸರಿ ಪಾಳಯದ ವಿರುದ್ಧ ಹೋರಾಡಬೇಕೆಂದರೆ, ಕಷ್ಟಗಳನ್ನು ಸಹಿಸಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ವಿರೋಧಿಸಿಕೊಳ್ಳುತ್ತಲೇ ಬರುತ್ತಿತ್ತು. ಹೀಗಾಗಿ ಎರಡೂ ಪಕ್ಷಗಳ ನಾಯಕರಲ್ಲಿ ಅಸಮಾಧಾನಗಳು ಮೂಡುವುದು ಸಾಮಾನ್ಯವಾಗಿರುತ್ತದೆ. ಗೆಲುವಿಗಾಗಿ ನಾವೆಲ್ಲರೂ ಒಗ್ಗಟ್ಟಿನಿದ ಕಾರ್ಯನಿರ್ವಹಿಸಲೇಬೇಕು. ಚುನಾವಣೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳನ್ನು ಮೈತ್ರಿ ಸರ್ಕಾರ ಕಣಕ್ಕೆ ಇಳಿಸಿದ್ದು, ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.