ಕೇಸರಿ ಶಾಲು ಧರಿಸಿಕೊಂಡು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದ ಪೂಜಾರಿ.vishwanews24
ಕೇಸರಿ ಶಾಲು ಧರಿಸಿಕೊಂಡು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದ ಪೂಜಾರಿ.
ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೀಡುಬದಿ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದ ಪೂಜಾರಿ ಇಂದು ನಾಮಪತ್ರ ಸಲ್ಲಿಸಿದರು.
ಸದಾ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡು ಹತ್ತಾರು ಕೇಸುಗಳನ್ನು ದಾಖಲಿಸಿಕೊಂಡ ಮುನ್ನಾ ಈ ಬಾರಿ ಚುನಾವಣೆ ಸ್ಪರ್ಧಿಸುವ ಸಮಯದಲ್ಲೂ ಕೂಡ ಕೇಸರಿ ಶಾಲು ಧರಿಸಿಕೊಂಡೆ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.
ಸುಮಾರು ಯುವಕರ ತಂಡದೊಂದಿಗೆ ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ಆಗಮಿಸಿ ಅವರು ನಾಮ ಪಾತ್ರ ಸಲ್ಲಿಸಿದರು.
ತದನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ” ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಚುನಾವಣೆ ಸದಾ ಹಿಂದುತ್ವ ಮಾತನಾಡಿ ಮತ ಪಡೆಯುವ ಬಿಜೆಪಿ ಮತ್ತು ಧರ್ಮ ಒಡೆದು ರಾಜಕೀಯ ನಡೆಸುವ ಕಾಂಗ್ರೆಸ್ ಮಧ್ಯ ನಾನೊಬ್ಬ ಬೀಡುಬದಿ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದೇನೆ,ಯಾವುದೇ ಆಮೀಷಗಳಿಗೆ ಬಲಿಯಾಗಿ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ- ಫಲಿತಾಂಶ ಮತದಾರದ ಕೈಯಲ್ಲಿದೆ ಕಾದು ನೋಡುವ ಎಂದರು”

