ಕೊರೊನಾಗೆ ಮದ್ದು ಸಿಂಪಡಿಕೆ ವದಂತಿ – ಬಾವಿಗೆ ಬಟ್ಟೆ, ಪ್ಲಾಸ್ಟಿಕ್‌‌‌‌‌ ಹೊದಿಕೆ..! ಸಾಮಾಜಿಕ ಜಾಲತಾಣದಲ್ಲಿ ವೈರಲ್‌‌ ಫೋಟೋ

Featured, ಉಡುಪಿ

ಕೊರೊನಾಗೆ ಮದ್ದು ಸಿಂಪಡಿಕೆ ವದಂತಿ – ಬಾವಿಗೆ ಬಟ್ಟೆ, ಪ್ಲಾಸ್ಟಿಕ್‌‌‌‌‌ ಹೊದಿಕೆ..!

udupi:  ಇತ್ತೀಚೆಗೆ ಕೊರೊನಾ ವೈರಸ್‌‌ ತಡೆಯಲು ಹೆಲಿಕಾಫ್ಟರ್‌‌ ಮೂಲಕ ಮದ್ದು ಸಿಂಪಡಿಸುತ್ತಾರೆ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಇದನ್ನು ಸತ್ಯವೆಂದು ನಂಬಿದ ಜನರು ಬಾವಿಗೆ ಬಟ್ಟೆ, ಪ್ಲಾಸ್ಟಿಕ್‌‌‌‌‌ ಹೊದಿಕೆ ಹಾಕಿರುವ ಘಟನೆ  ನಡೆದಿದೆ.

ಹಲವೆಡೆಯಲ್ಲಿ ಈ ವದಂತಿಯನ್ನು ನಂಬಿರುವ ಜನರು ಸಿಂಪಡಿಸಿದ ಮದ್ದು ತಮ್ಮ ಬಾವಿಗೆ ಬೀಳದಿರಲಿ ಎಂದು ಬಾವಿಗೆ ಬಟ್ಟೆ, ಪ್ಲಾಸ್ಟಿಕ್‌‌‌‌‌ ಹೊದಿಕೆ ಮೂಲಕ ಮುಚ್ಚಿದ್ದು, ಇದೀಗ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌‌ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ಕೊರೊನಾ ವೈರಸ್‌‌ ತಡೆಯಲು ಹೆಲಿಕಾಫ್ಟರ್‌‌ ಮೂಲಕ ಮದ್ದು ಸಿಂಪಡಿಸುತ್ತಾರೆ ಹಾಗಾಗಿ ಮನೆಯಿಂದ ಯಾರೂ ಹೊರಬರಬೇಡಿ ಎನ್ನುವ ಸುದ್ದಿ ವೈರಲ್‌‌ ಆಗಿತ್ತು.