ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ, ಇಟಲಿಯನ್ನು ಹಿಂದಿಕ್ಕಿ, ಆರನೇ ಸ್ಥಾನಕ್ಕೆ ಏರಿಕೆ: vishwanews24
ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ, ಇಟಲಿಯನ್ನು ಹಿಂದಿಕ್ಕಿ, ಆರನೇ ಸ್ಥಾನಕ್ಕೆ ಏರಿಕೆ: vishwanews24
ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ, ಇಟಲಿಯನ್ನು ಹಿಂದಿಕ್ಕಿ, ಆರನೇ ಸ್ಥಾನಕ್ಕೆ ಏರಿದೆ. ದಿನಕಳೆದಂತೆ ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 9,887 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ಇನ್ನು ದೇಶದಲ್ಲಿ ಸಾವಿನ ಸಂಖ್ಯೆಯು ಹೆಚ್ಚಳವಾಗಿತ್ತಿದ್ದು, 24 ಗಂಟೆಯಲ್ಲಿ 294 ಜನ ಮೃತಪಟ್ಟಿದ್ದಾರೆ. ಇನ್ನು ನಿನ್ನೆ 4,611 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,36,657ಕ್ಕೆ ಏರಿಕೆಯಾಗಿದೆ. ಆದ್ರೆ ಇಂದು ಬೆಳಗ್ಗೆ 9.30ರ ಸುಮಾರಿಗೆ ವರ್ಲ್ಡೋಮೀಟರ್ ಮಾಹಿತಿಯ ಪ್ರಕಾರ ಇಟಲಿಯಲ್ಲಿ ಇದ್ದ ಒಟ್ಟಾರೆ ಸೋಂಕಿತರ ಸಂಖ್ಯೆ 2,34,531.
ಇಂದಿನ ಅಂಕಿ ಅಂಶಗಳು
- ಹೊಸ ಪ್ರಕರಣಗಳು – 9,887
- ಮೃತಪಟ್ಟವರು – 294
- ಒಟ್ಟಾರೆ ಸೋಂಕಿತರು – 2,36,657
- ಸಕ್ರಿಯ ಪ್ರಕರಣಗಳು – 1,15,942
- ಗುಣಮುಖರಾದವರು – 1,14,073
- ಒಟ್ಟಾರೆ ಮೃತರ ಸಂಖ್ಯೆ- 6,642
