ಕೊರೋನಾ ಎಂಬುದು ಲೋಕ ಕಂಟಕ ಇದಕ್ಕೆ ಪರಿಹಾರ ಸಮಾಜಿಕ ಅಂತರ ಮತ್ತು ಎಚ್ಚರಿಕೆ:ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ .vishwanews24
ಕೊರೋನಾ ಎಂಬುದು ಲೋಕ ಕಂಟಕ ಇದಕ್ಕೆ ಪರಿಹಾರ ಸಮಾಜಿಕ ಅಂತರ ಮತ್ತು ಎಚ್ಚರಿಕೆ:ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ .
ಕಾಪು: ದುರ್ಗಾ ಮಿತ್ರವೃಂದ ಕುಂಜೂರು ಇವರ ವತಿಯಿಂದ ಸಂಕಷ್ಟಕ್ಕಿಡಾಗಿರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮ ಕುಂಜೂರು ದೇಗುಲದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತಾಡಿ ” ಇಡೀ ವಿಶ್ವಕ್ಕೆ ಆವರಿಸಿರುವ ಮಹಾಕಂಟಕ ಕೊರೋನಾ ಎಂಬ ರೋಗದಿಂದ ಜನಜೀವನ ಅಸ್ತವ್ಯಸ್ತವಾಗಿದೆ ಅಂತಹ ಸಂಧರ್ಭದಲ್ಲಿ ಬಡಕುಟುಂಬ ಗುರುತಿಸಿ ಸಹಕಾರ ಮಾಡುವುದು ಉತ್ತಮ ಕೆಲಸ ಕಾರ್ಯ. ಪ್ರಸ್ತುತ ಕೊರೋನಾ ತಡೆಗಟ್ಟಲು ಸಮಾಜಿಕ ಅಂತರ ಎಚ್ಚರಿಕೆ ಒಂದೇ ಪರಿಹಾರ ಎಂದರು.
ಈ ಸಂಧರ್ಭದಲ್ಲಿ ಪವಿತ್ರಪಾಣಿ ಕೆ.ಎಲ್ ಕುಂಡಂತಾಯ, ಆಡಳಿತ ಮಂಡಳಿ ಅಧ್ಯಕ್ಷ ದೇವರಾಜ ರಾವ್, ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಪದಾಧಿಕಾರಿಗಳು ಮತ್ತು ಸದಸ್ಯರು, ದಾನಿಗಳು ಉಪಸ್ಥಿತರಿದ್ದರು.
