ಕೊಲೆ ಮಾಡುವಂತಹ ಬುದ್ಧಿ ದರ್ಶನ್‌ಗೆ ಇಲ್ಲ : ನಟನ ಪರ ಬ್ಯಾಟ್ ಬೀಸಿದ ಮದ್ದೂರು ಶಾಸಕ – vishwanews24
ಕೊಲೆ ಮಾಡುವಂತಹ ಬುದ್ಧಿ ದರ್ಶನ್‌ಗೆ ಇಲ್ಲ : ನಟನ ಪರ ಬ್ಯಾಟಿಂಗ್ ಮಾಡಿದ ಮದ್ದೂರು ಶಾಸಕ
ಬೆಂಗಳೂರು: ದರ್ಶನ್ ಪ್ರಕರಣದಲ್ಲಿ ಯಾರೂ ಯಾವುದೇ ಹೇಳಿಕೆ ನೀಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೂ ಮದ್ದೂರು ಶಾಸಕ ಕದಲೂರು ಉದಯ್ ಗೌಡ ನಟನ ಪರ ಬ್ಯಾಟ್ ಬೀಸಿದ್ದಾರೆ.
ದರ್ಶನ್ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಯಾಗಿದ್ದು ಸ್ವಲ್ಪ ಸಿಡುಕು ಹೊಂದಿದ್ದಾರೆ. ಕೊಲೆ ಮಾಡುವಂತಹ ಬುದ್ಧಿ ದರ್ಶನ್‌ಗೆ ಇಲ್ಲ ಎಂದು ಉದಯ್ ಗೌಡ ಸರ್ಟಿಫಿಕೇಟ್ ನೀಡಿದ್ದಾರೆ.
ತುಂಬಾ ವರ್ಷಗಳಿಂದ ನಾನು ಮತ್ತು ದರ್ಶನ್ ಸ್ನೇಹಿತರಾಗಿದ್ದೇವೆ. ಇದು ಯಾಕೆ ಆಯ್ತು? ಏನಕ್ಕೆ ಆಯ್ತು ಅಂತ ನಮಗೆ ಮಾಹಿತಿ ಇಲ್ಲ. ತನಿಖೆಯಲ್ಲಿ ಸತ್ಯ ವಿಚಾರ ಗೊತ್ತಾಗುತ್ತದೆ. ಇಷ್ಟಂತೂ ಸತ್ಯ ದರ್ಶನ್ ಕೊಲೆಗಡುಕ ಅಲ್ಲ ಎಂದು ತಿಳಿಸಿದರು.
