ಕೋಟಾ ಕೊರಗ ಜನಾಂಗದ ಮೆಹಂದಿಗೆ ಪೊಲೀಸ್ ದಾಳಿ- ಹಲ್ಲೆ ಖಂಡನೀಯ: ಮಾಜಿ ಶಾಸಕ ಎಚ್.ಡಿ ಬಸವರಾಜು: vishwanews24
ಕೋಟಾ ಕೊರಗ ಜನಾಂಗದ ಮೆಹಂದಿಗೆ ಪೊಲೀಸ್ ದಾಳಿ- ಹಲ್ಲೆ ಖಂಡನೀಯ: ಮಾಜಿ ಶಾಸಕ ಎಚ್.ಡಿ ಬಸವರಾಜು
ಉಡುಪಿ: ಕೋಟಾ ಕೊರಗ ಜನಾಂಗದ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ನಡೆಸಿ ವರನಿಗೆ ಸಮೇತವಾಗಿ ಹಲವಾರು ಮಂದಿಗೆ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿತ್ತು.
ಘಟನೆಯ ನಂತರ ನೂರಾರು ಬೆಳವಣಿಗೆಗಳು ವಿವಿಧ ಅಧಿಕಾರಿಗಳು- ಸಚಿವರು- ಶಾಸಕರು ಭೇಟಿ ನೀಡಿ ಸಾಂತ್ವನ ಮಾಡುವ ಪ್ರಯತ್ನ ನಡೆಯಿತು.
ಈಗ ಆಮ್ ಆದ್ಮಿ ಪಾರ್ಟಿಯ ಸರದಿ ” ಕೋಟಾ ಪ್ರಕರಣವನ್ನು AAP ತೀವ್ರವಾಗಿ ಖಂಡಿಸಿದರು.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ AAP ಮುಖ್ಯಸ್ಥ ಎಚ್.ಡಿ ಬಸವರಾಜ ಮಾತನಾಡಿ ” ಜನಪ್ರತಿನಿಧಿಗಳು ಜನರಿಗೆ ಸಹಕಾರಿಗಳಾಗಿರಬೇಕು ಹೊರತು ಇಂತಹ ಘಟನೆಗಳು ನಡೆದಾಗ ಅದರ ವಿರುದ್ಧ ನಿಂತು ಧೈರ್ಯ ತುಂಬುವ ಕೆಲಸಮಾಡಬೇಕಿದೆ ಅದನ್ನು ಬಿಟ್ಟು ಬರೀ ಭೇಟಿ ನೀಡಿ ಫೋಟೋ ಫೋಸ್ ಕೊಟ್ಟು ಬರುವುದಲ್ಲ ಈ ಬಗ್ಗೆ ತುರ್ತಾಗಿ ತನಿಖೆ ಆಗ್ಬೇಕು ಮತ್ತು ಹಲ್ಲೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು ಎಂದರು.
ಬಿಜೆಪಿ ಕಾಂಗ್ರೆಸ್ ಬರೀ ದಲಿತರ ಜತೆ ನಿಲ್ಲುವ ನಾಟಕ ಮಾಡುತ್ತಿದೆ ಹೊರತು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.ಈ ದೌರ್ಜನ್ಯದಲ್ಲಿ ಭಾಗಿಯಾದ ಪೊಲೀಸರ ಮೇಲೆ ಕಠಿಣಕ್ರಮ ಜರುಗಿಸಬೇಕು ಮತ್ತು ಆ ಜನಾಂಗದವರನ್ನು ರಕ್ಷಿಸಲು ಪಣತೊಡಬೇಕು ಆಗುವುದಿಲ್ಲ ಎಂದಾದರೆ ಸಚಿವರು ಶಾಸಕರು ರಾಜಿನಾಮೆ ನೀಡಲಿ ” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಕಿಶನ್ ಪೂಜಾರಿ, ರಮೇಶ್ ಕೋಟ್ಯಾನ್, ವಿಜಯಾನಂದ ಪಾಂಗಾಳ,ಸುರೇಶ್ ಭಂಡಾರಿ ಉಪಸ್ಥಿತರಿದ್ದರು.
