ಕೋವಿಡ್ ನಿಯಂತ್ರಣ : ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿ ದಿನ 10 ಸಾವಿರ ಭಕ್ತರ ಭೇಟಿಗೆ ಅವಕಾಶ – Vishwanews24

Featured, ರಾಷ್ಟ್ರ ನ್ಯೂಸ್

ಕೋವಿಡ್ ನಿಯಂತ್ರಣ : ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿ ದಿನ 10 ಸಾವಿರ ಭಕ್ತರ ಭೇಟಿಗೆ ಅವಕಾಶ – Vishwanews24

ಶಿರಡಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದರಿಂದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿ ದಿನ 10 ಸಾವಿರ ಭಕ್ತರ ಭೇಟಿಗೆ ಅಹ್ಮದ್‌ನಗರ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.

ಅಕ್ಟೋಬರ್ 6ರಂದು ಹೊರಡಿಸಲಾದ ಆದೇಶದಂತೆ ಆನ್‌ಲೈನ್‌ ಪಾಸ್ ಹೊಂದಿದ 15 ಸಾವಿರ ಮಂದಿ ಪ್ರತಿದಿನ ದರ್ಶನ ಪಡೆಯಬಹುದಾಗಿದೆ.  ಆ ಆದೇಶ ಮುಂದುವರಿಯಲಿದ್ದು, ಇದೀಗ ಆಫ್‌ಲೈನ್‌ ಪಾಸ್ ಹೊಂದಿದ 10 ಸಾವಿರ ಮಂದಿಗೂ ದರ್ಶನ ಅವಕಾಶ ಸಿಕ್ಕಿದೆ. ಹೀಗಾಗಿ ಪ್ರತಿದಿನ 25 ಸಾವಿರ ಭಕ್ತರು ದರ್ಶನ ಪಡೆಯುವುದು ಸಾಧ್ಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಪ್ರತಿದಿನ ಕೋವಿಡ್‌ ದೃಢ ಪ್ರಮಾಣ 1 ಸಾವಿರಕ್ಕಿಂತ ಕಡಿಮೆ ಇದೆ.

ಕುಂದಾಪುರ : ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ : ಸಚಿವ ಕೋಟ ಶ್ರೀನಿವಾಸ ಪೂಜಾರಿ – Vishwanews24