ಕೋವಿಡ್ ವ್ಯಾಕ್ಸಿನ್ : ಕೆಲವು ಮಾಜಿ‌‌ ಕಾಪು ಪುರಸಭೆ ಸದಸ್ಯರ ಒತ್ತಡಕ್ಕೆ ಬಗ್ಗದ ಸರ್ಕಾರಿ ವೈದ್ಯನ‌ ವಿರುದ್ಧ ಕಿಡಿಕಾರಿದ ಜನ-ಗೊಂದಲ ಬಗೆಹರಿಸಿದ ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್

Featured, ಉಡುಪಿ

ಕೋವಿಡ್ ವ್ಯಾಕ್ಸಿನ್ : ಕೆಲವು ಮಾಜಿ‌‌ ಕಾಪು ಪುರಸಭೆ ಸದಸ್ಯರ ಒತ್ತಡಕ್ಕೆ ಬಗ್ಗದ ಸರ್ಕಾರಿ ವೈದ್ಯನ‌ ವಿರುದ್ಧ ಕಿಡಿಕಾರಿದ ಜನ: ಗೊಂದಲ ಬಗೆಹರಿಸಿದ ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್

ಕಾಪು: ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ಸೋಮವಾರ ಫ್ರಂಟ್ ಲೈನ್ ವರ್ಕರ್ ಹಾಗೂ ವಿದೇಶ ಪ್ರವಾಸ ಮಾಡುವವರಿಗೆ ಮಾತ್ರ ವ್ಯಾಕ್ಸಿನೇಷನ್‌ ಬಗ್ಗೆ ತಿಳಿಯಪಡಿಸಿತ್ತು ಆದರೇ ವ್ಯಾಕ್ಸಿನೇಷನ್‌ ಇದೆ ಎಂಬ ಸುಳ್ಳು ವಾಟ್ಸಪ್ ಮೆಸೇಜ್ ಹರಿದಾಡಿದ ಪರಿಣಾಮದಿಂದ ಆಸ್ಪತ್ರೆಗೆ ಬೆಳಗ್ಗೆಯ ಜನ ಧಾವಿಸಿದ್ದರು ಇದರ ನಡುವೆ ಪುರಸಭೆಯ ಮಾಜಿ ಸದಸ್ಯರು ಕೆಲವರು ಆಸ್ಪತ್ರೆಯ ಒಳಗಡೆ ತೆರಳಿ ನರ್ಸ್ ಹಾಗೂ ಸಿಬ್ಬಂದಿಗಳ ಜತೆ ಪುರಸಭೆ ಸದಸ್ಯರ ಆಪ್ತರಿಗೆ ವ್ಯಾಕ್ಸಿನೇಷನ್‌ ಮಾಡುವ ಬಗ್ಗೆ ಒತ್ತಡ ಮಾಡಿದ ಪರಿಣಾಮ ಅದಕ್ಕೆ ಒಪ್ಪದ ವೈದ್ಯಾಧಿಕಾರಿ ಸುಬ್ರಯಾ ಕಾಮತ್ ವಿರುದ್ಧ ಮಾಜಿ ಸದಸ್ಯರು ಕಿಡಿಕಾರಿದ ಘಟನೆ ನಡೆಯಿತು ಇವರೊಂದಿಗೆ ಸೇರಿದ ಜನಸ್ತೋಮ ಕೂಡ ಧ್ವನಿಗೂಡಿಸಿತು.
ಈ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಮಾತಾನಾಡಿ” ವ್ಯಾಕ್ಸಿನೇಷನ್‌ ಇದೆ ಎಂಬ ಸುಳ್ಳು ಸುದ್ದಿ ಹರಿದಾಡಿದ ಪರಿಣಾಮ ಈ ರೀತಿಯ ಗೊಂದಲ ಉಂಟಾಗಿದೆ ಮುಂದಿನ ದಿನ ಈ ರೀತಿಯಾಗದಂತೆ ಕಾರ್ಯಪ್ರವೃತರಾಗಲಿದೆ ಎಂದರು”.

“ನಾವು ಸರ್ಕಾರದ ಆದೇಶದ ಪ್ರಕಾರ ಕಾರ್ಯನಿರ್ವಹಿಸುವುದು ವಿನಹ ಜನಪ್ರತಿನಿಧಿಗಳು ನಮಗೆ ಯಾವುದೇ ಒತ್ತಡ ಹಾಕಿದರೂ ನೀಡಲು ಸಾಧ್ಯವಾಗುವುದಿಲ್ಲ ಏಕೆಂದರೆ ವ್ಯಾಕ್ಸಿನ್ ಇಂಡೆಟ್ ಪ್ರಕಾರ ಬರುತ್ತೆ ಬಂದಿರುವುದನ್ನು ಸರ್ಕಾರದ ಆದೇಶದಂತೆ ನೀಡಲಾಗುತ್ತದೆ”
ಡಾ.ಸುಬ್ರಾಯ ಕಾಮತ್
ವೈಧ್ಯಧಿಕಾರಿ-ಕಾಪು ಪಿ.ಎಚ್.ಸಿ

ಸ್ಥಳಕ್ಕಾಗಮಿಸಿದ ಕಾಪು ಪೋಲಿಸರು ಪರಿಸ್ಥಿತಿಯನ್ನು ಸುಧಾರಿಸಿ ಬಂದಿರುವ ಜನರಿಗೆ ಸಮಸ್ಯೆಯ ಬಗ್ಗೆ ತಿಳುವಳಿಕೆ ಮೂಡಿಸಿ ಗೊಂದಲ ಬಗೆಹರಿಸಿದರು.