ಗಮನಿಸಿ : ಮುಂದಿನ ವಾರ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ – Vishwanews24
ಗಮನಿಸಿ : ಮುಂದಿನ ವಾರ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ – Vishwanews24
ಬೆಂಗಳೂರು: ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ. ಡಿಸೆಂಬರ್ 16, 17, 18 ಹಾಗೂ 19ರಂದು ಬ್ಯಾಂಕುಗಳಿಗೆ ರಜೆಯಿದೆ. ಹೀಗಾಗಿ ಈ ದಿನಗಳಂದು ಯಾವುದೇ ಬ್ಯಾಂಕ್ ಕೆಲಸಗಳನ್ನಿಟ್ಟುಕೊಳ್ಳಬೇಡಿ. ಆದ್ರೆ ಈ ದಿನಗಳಲ್ಲಿ ಎಲ್ಲ ಬ್ಯಾಂಕಿಂಗ್ ಆನ್ಲೈನ್ ವಹಿವಾಟುಗಳು ಎಂದಿನಂತೆ ನಡೆಯಲಿವೆ.
ಮುಂದಿನ ವಾರ ಬ್ಯಾಂಕ್ ರಜೆಗಳ ಪಟ್ಟಿ
* ಡಿಸೆಂಬರ್ 16: ಬ್ಯಾಂಕ್ ಖಾಸಗೀಕರಣದ ವಿರುದ್ಧ ಬ್ಯಾಂಕ್ ಯೂನಿಯನ್ ಮುಷ್ಕರ
* ಡಿಸೆಂಬರ್ 17: ಬ್ಯಾಂಕ್ ಖಾಸಗೀಕರಣದ ವಿರುದ್ಧ ಬ್ಯಾಂಕ್ ಯೂನಿಯನ್ ಮುಷ್ಕರ
* ಡಿಸೆಂಬರ್ 18: ಯು ಸೊಸೊ ಥಾಮ್ ಪುಣ್ಯ ಸ್ಮರಣೆ/ಗುರುಘಿಸಿದಾಸ್ ಜಯಂತಿ
* ಡಿಸೆಂಬರ್ 19: ಭಾನುವಾರ
ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣಕ್ಕೆ ಸಂಬಂಧಿಸಿ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಇಚ್ಛಿಸಿರೋ ಮಸೂದೆಯನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೆ ಸಂಬಂಧಿಸಿ ಭಾರತೀಯ ಬ್ಯಾಂಕ್ ಗಳ ಸಂಘಟನೆಗೆ ಯುನೈಟೆಡ್ ಫೋರಂ ನೋಟಿಸ್ ಕೂಡ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಗುರುವಾರ ಹಾಗೂ ಶುಕ್ರವಾರ ಬ್ಯಾಂಕುಗಳು ಮುಚ್ಚಿರಲಿವೆ. ಈ ವರ್ಷ ಫೆಬ್ರವರಿಯಲ್ಲಿ 2021-22ನೇ ಸಾಲಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪಿಸಿದ್ದರು.1.75ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸೋ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ಚಳವಳಿ ನಡೆಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ ನಿರ್ಧರಿಸಿದೆ.
ಬೆಳ್ತಂಗಡಿ: ನದಿಗೆ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿ ನಿರಿನಲ್ಲಿ ಮುಳುಗಿ ಸಾವು – Vishwanews24
